ಮಂಗಳವಾರ, ಜೂನ್ 15, 2021
21 °C

ಮಲೇಷ್ಯಾ ಬಸ್ ಅಪಘಾತ: ಇಬ್ಬರು ಭಾರತೀಯರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೌಲಲಾಂಪುರ (ಐಎಎನ್ಎಸ್):  ಪಹಾಂಗ್ ರಾಜ್ಯದ ಹೆಸರಾಂತ ಜೆಂಟಿಂಗ್ ಹೈಲ್ಯಾಂಡ್ಸ್ ರೆಸಾರ್ಟ್ ನಿಂದ ಹಿಂತಿರುಗುತ್ತಿದ್ದ ಭಾರತೀಯ ಪ್ರವಾಸಿಗರಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಇಬ್ಬರು ಭಾರತೀಯ ಪ್ರವಾಸಿಗರು ಮೃತಪಟ್ಟು, 22  ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಜರುಗಿದೆ.~ಅಪಘಾತಕ್ಕೀಡಾದ ಬಸ್ಸಿನ ಪ್ರವಾಸಿಗರೆಲ್ಲರೂ ಭಾರತೀಯ ಮೂಲದವರು. ಜೆಂಟಿಗ್ ಹೈಲ್ಯಾಂಡ್ಸ್ ರೆಸಾರ್ಟ್ ನಿಂದ ಹಿಂತಿರುಗುವಾಗ ಅವರು ಪ್ರಯಾಣಿಸುತ್ತಿದ್ದ ಬಸ್ಸು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡಿದಿದೆ. ನಂತರ ಅದು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದ ಆಚೆ ಮಗುಚಿತು~ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಮೊಹಮ್ಮದ್ ಯೂಸ್ರಿ ಹಸ್ಸಾನ್ ಬಸ್ರಿ ತಿಳಿಸಿದ್ದಾರೆ.ಮೃತಪಟ್ಟ ಇಬ್ಬರು ಪ್ರಯಾಣಿಕರಲ್ಲಿ 50 ವರ್ಷದ ಮಹಿಳೆಯೂ ಸೇರಿದ್ದಾಳೆ.  ಜೊತೆಗೆ ಈ ಅಪಘಾತದಲ್ಲಿ ಬಸ್ಸಿನ ಇಬ್ಬರು ಚಾಲಕರೂ  ಸೇರಿದ್ದಾರೆ ಎನ್ನಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.