ಶನಿವಾರ, ಸೆಪ್ಟೆಂಬರ್ 21, 2019
21 °C

ಮಲ್ಪೆ: ಕಡಲಿಗಿಳಿಯದ ಬೋಟ್‌ಗಳು

Published:
Updated:

ಉಡುಪಿ: ಅರಬ್ಬಿ ಸಮುದ್ರದಲ್ಲಿ ಹವಾಮಾನ ಅನುಕೂಲಕರವಾಗಿರದ ಕಾರಣ ಮಲ್ಪೆ ಮೀನುಗಾರಿಕಾ ಬಂದರಿನ ದೋಣಿಗಳು ಕಳೆದ ಒಂದು ವಾರದಿಂದ ಮೀನುಗಾರಿಕೆಗೆ ತೆರಳಿಲ್ಲ. ಸಾವಿರಾರು ದೋಣಿಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ.`ನಾಲ್ಕೈದು ದಿನಗಳ ಹಿಂದೆ ಕರಾವಳಿ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹಾಗಾಗಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದು ಕಷ್ಟಕರವಾಗಿದೆ. ಮಂಗಳವಾರ ಸಮುದ್ರ ಸಹಜ ಸ್ಥಿತಿಗೆ ಮರಳಿದರೆ ಮೀನುಗಾರರು ಕಡಲಿಗೆ ಇಳಿಯಲಿದ್ದಾರೆ~ ಎಂದು ಮೀನುಗಾರರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

Post Comments (+)