ಗುರುವಾರ , ಜನವರಿ 23, 2020
19 °C

ಮಲ್ಯ ಒಡೆತನದ ಯುಬಿಎಚ್‌ಎಲ್‌ ಷೇರು ವಿಕ್ರಯಕ್ಕೆ ಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ಯಮಿ ವಿಜಯ್‌ ಮಲ್ಯ ಒಡೆತನದ ಯುಬಿ ಹೋಲ್ಡಿಂಗ್ಸ್ ಲಿಮಿ­ಟೆಡ್‌ (ಯುಬಿಎಚ್‌ಎಲ್‌) ಇಂಗ್ಲೆಂಡ್‌ ಮೂಲದ ಡಿಯಾಗೊ ಸ್ಪಿರಿಟ್ಸ್‌ ಕಂಪೆನಿಗೆ ಷೇರು ಮಾರಾಟ ಮಾಡಿರುವುದಕ್ಕೆ ಅವಕಾಶ ನೀಡಿರುವ ಏಕಸದಸ್ಯ ಪೀಠದ ಆದೇಶವನ್ನು ರದ್ದು ಮಾಡಿರುವ ವಿಭಾಗೀಯ ಪೀಠ, ಮುಂದೆ ಯುಬಿ­ಎಚ್‌ಎಲ್‌ ಯಾವುದೇ ಷೇರು ಅಥವಾ ಆಸ್ತಿಯನ್ನು ಪರಭಾರೆ ಮಾಡುವಂತಿಲ್ಲ ಎಂದು ಆದೇಶಿಸಿದೆ.ಯುಬಿಎಚ್ಎಲ್‌ಗೆ ಸಾಲ ನೀಡಿದ್ದ ಬಿಎನ್‌ಪಿ ಪರಿಬಾಸ್‌ ಮತ್ತು ಇತರೆ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕಂಪೆನಿಯನ್ನು ಪರಿಸಮಾಪ್ತಿ ಮಾಡಿ ಬಾಕಿ ಪಾವತಿಸಲು ಆದೇಶಿಸುವಂತೆ ಕೋರಿ­ದ್ದವು. ಆದರೆ, ಈ ಅರ್ಜಿ ವಿಚಾರ­ಣೆಗೆ ಬಾಕಿ ಇರುವಾಗಲೇ ಹೈಕೋರ್ಟ್‌ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಯುಬಿಎಚ್‌ಎಲ್‌, ತನ್ನ ಷೇರುಗಳನ್ನು ಡಿಯಾಗೊ ಕಂಪೆನಿಗೆ ಮಾರಲು ಷರತ್ತು­ಬದ್ಧ ಅನುಮತಿ ಪಡೆದುಕೊಂಡಿತ್ತು.ಬಿಎನ್‌ಪಿ ಪರಿಬಾಸ್‌ ಮತ್ತು ಇತರ ಬ್ಯಾಂಕರುಗಳು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಕುಮಾರ್‌ ಮತ್ತು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ವಿಭಾಗೀಯ ಪೀಠ, ‘ಬ್ಯಾಂಕರುಗಳ ಅರ್ಜಿ ಬಾಕಿ ಇರುವಾಗಲೇ ಯುಬಿ­ಎಚ್ಎಲ್‌ಗೆ ಷೇರು ವಿಕ್ರಯಕ್ಕೆ ಅನು­ಮತಿ ನೀಡಿದ ಕ್ರಮ ಸರಿಯಲ್ಲ’ ಎಂದು ಹೇಳಿದೆ.ತಲಾ ರೂ 1,440 ಬೆಲೆಯ 1.36 ಕೋಟಿಗೂ ಹೆಚ್ಚು ಷೇರುಗಳನ್ನು ಡಿಯಾಗೊ ಕಂಪೆನಿಯು ಯುಬಿ­ಎಚ್‌ಎಲ್‌ನಿಂದ ಖರೀದಿಸಿದೆ. ಈ ಖರೀದಿಯು ಯುಬಿಎಚ್‌ಎಲ್‌ ಪರಿಸ­ಮಾ­ಪ್ತಿಗೆ ಆದೇಶಿಸುವಂತೆ ಕೋರಿ ಬ್ಯಾಂಕರುಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡುವ ಆದೇಶದ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)