ಭಾನುವಾರ, ಏಪ್ರಿಲ್ 18, 2021
33 °C

ಮಳೆಗಾಳಿಗೆ ರಸ್ತೆಗೆ ಉರುಳಿದ ಮರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಬುಧವಾರದಿಂದ ಪಟ್ಟಣದ ಸೇರಿದಂತೆ ತಾಲ್ಲೂಕಿನಲ್ಲಿ ಒಂದೇ ಸಮನೆ ಮಳೆ ಬೀಳುತ್ತಿದ್ದು ರಸ್ತೆಯಲ್ಲಿ ಒಣಗಿದ ಮತ್ತು ಬಾಗಿದ ಮರಗಳು ಅ್ಲ್ಲಲಲ್ಲಿ ಉರುಳಿ ಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.ಸಾತನೂರು ರಸ್ತೆ ತೋಟಳ್ಳಿ ಗೇಟ್‌ಬಳಿ, ರಾಮನಗರ ರಸ್ತೆಯ ಕೋಣನಸೆಡ್ಡು ಬಳಿ, ಬೆಂಗಳೂರು ರಸ್ತೆಯಲ್ಲಿ ಮತ್ತು ಬೂದಿಕೆರೆ ರಸ್ತೆಯ ಬಸ್ ನಿಲ್ದಾಣದ ಪಕ್ಕದಲ್ಲೇ ಮರಗಳು ಉರುಳಿಬಿದ್ದಿವೆ.ಸಂಬಂಧಿಸಿದ ಇಲಾಖೆಯವರು ಉರುಳಿ ಬಿದ್ದಿದ್ದ ಮರಗಳನ್ನು ಕಡಿದು ತಾತ್ಕಲಿವಾಗಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಿಯೂ ಯಾವುದೇ ಅಪಾಯಗಳು ಸಂಭವಿಸಿದ ವರದಿಯಾಗಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.