ಕುರುಗೋಡು: ಕಳೆದ ಎರಡು ವಾರದ ಹಿಂದೆ ಸುರಿದ ಉತ್ತಮ ಮಳೆಯಿಂದ ಉತ್ಸುಕರಾಗಿ ಬಿತ್ತನೆ ಮಾಡಿದ್ದ ರೈತರು ಇದೀಗ ಮಳೆ ಮರೆಯಾಗಿದ್ದರಿಂದ ಆತಂಕದ ಛಾಯೆ ಮೂಡಿದೆ.

ಅಲ್ಪಸ್ವಲ್ಪ ಮಳೆ ಸುರಿದಿದ್ದರಿಂದ ಮುಂದೆ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ಹೊತ್ತು ರೈತರು ಬಿತ್ತನೆ ನಡೆಸಿದ್ದರು. ಜಮೀನಿನಲ್ಲಿ ಬಿತ್ತನೆಗೊಂಡ ಬೀಜ ಅಲ್ಲಲ್ಲಿ ಮೊಳಕೆ ಹೊರಟಿವೆ. ಆದರೆ ಬೀಸುತ್ತಿರುವ ತಂಪು ಮಿಶ್ರಿತ ಗಾಳಿ ಜಮೀನಿನ ತೇವಾಂಶ ಹೀರುತ್ತಿದ್ದು, ಸಸಿಗಳು ಬಾಡತೊಡಗಿವೆ. ಸಕಾಲಕ್ಕೆ ಮಳೆಯಾಗದೆ ಇರುವುದರ ಜೊತೆಗೆ ಸಕಾಲಕ್ಕೆ ಕಾಲುವೆ ನೀರು ಬಿಡದೇ ಇರುವುದು ಸಮಸ್ಯೆ ಉಲ್ಬಣಗೊಂಡಿದೆ.

ಮೊಳಕೆಯೊಡೆದ ಸಸಿಗಳನ್ನು ರಕ್ಷಿಸಲು ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ.ಪ್ರತಿ ದಿನ ಗ್ರಾಮದ ಕೊಳವೆಬಾವಿ ಮತ್ತು ಹಳೆ ಬಾವಿ ನೀರಿಗೆ ಮುಗಿಬಿದ್ದಿದ್ದಾರೆ.

`ಒಳ್ಳೆ ಮಳೆ ಬರತೈತೆ ಅಂತ ಸಾಲಮಾಡಿ ಬೀಜ ಗೊಬ್ಬರ ತಂದೀವಿ, ಅಪರೂಪಕ್ಕೆ ಬಂದ ಮಳೆಗೆ ಆಸೆ ಪಟ್ಟು ಸಜ್ಜೆ ಬಿತ್ತೀವಿ. ಬೀಜ ಮೊಳಕೆ ಒಡದು ಮೇಲೆ ಬಂದು ನೀರು ಇಲ್ದೆ ಬಾಡಾಕತ್ತ್ಯಾವ. ಅದಕ್ಕೆ ಊರಾಗಿನ ಬೋರ್ಲಿದ್ದ ನೀರು ಹಿಡಿದು ಸಸಿಗೆ ಹಾಕಕತ್ತೀವಿ~ ಎಂದು 14 ಎಕರೆ ಜಮಿನಲ್ಲಿ ಸಜ್ಜೆಬಿತ್ತನೆ ಮಾಡಿದ ಕ್ಯಾದಿಗಿಹಾಳ್ ರುದ್ರಗೌಡ ತಾನು ಅನುಭವಿಸುತ್ತಿರುವ ಪರಿಸ್ಥಿತಿ ವಿವರಿಸಿ ಕಣ್ಣೀರು ಸುರಿಸುತ್ತಾನೆ.

ಒಟ್ಟು ಐದು ಕೆರೆ ಜಮೀನಿನಲ್ಲಿ ಹತ್ತಿ ಬೀಜ ಬಿತ್ತಿದ್ದಾನೆ. ಬೀಜಕ್ಕೆ ರೂ 1600ರೂ. ನಂತೆ ಎಕರೆಗೆ 3200 ರೂಪಾಯಿ ಖರ್ಚು ವೆಚ್ಚಮಾಡಿದ ವದ್ದಟ್ಟಿ ಗ್ರಾಮದ ರೈತ ನಾರಾಯಣರೆಡ್ಡಿ, `ಕಾಲುವೆ ನೀರು ಬಂದರೆ ನಮ್ಮ ಪರಿಶ್ರಮಕ್ಕೆ ಬೆಲೆ ಸಿಕ್ಕೀತು~ ಎನ್ನುವ ಕನಸಿನೊಂದಿಗೆ ಪ್ರತಿದಿನ ಕುಟುಂಬ ಸದಸ್ಯರೊಂದಿದೆ ಬೆಳಿಗ್ಗೆಯಿಂದ ಸಂಜೆ ವರೆಗೆ ಗ್ರಾಮದಲ್ಲಿನ ಕೊಳವೆ ಬಾವಿ ನೀರನ್ನು ಡ್ರಂಗಳಲ್ಲಿ ಸಂಗ್ರಹಿಸಿ ಕೈ ಬಂಡಿ ಮೂಲಕ ಹೊಲದಲ್ಲಿ ಸಸಿಗಳಿಗೆ ನೀರುಣಿಸುತ್ತಿದ್ದಾರೆ.

ಕಷ್ಟಪಟ್ಟು ದುಡಿವ ರೈತರನ್ನು ಭೂತಾಯಿ ಕಾಪಾಡುತ್ತಾಳೆ ಎಂಬ ಆತ್ಮ ವಿಶ್ವಾಸ ಹೊಂದಿದ ಕುರುಗೋಡಿನ ಇನ್ನೊಬ್ಬ ಪ್ರಗತಿಪರ ರೈತ ಬಸವನಗೌಡರ ಸ್ಥಿತಿ ಇದಕ್ಕೆ ಹೊರತಾಗಿಲ್ಲ.

ಈ ಭಾಗದ ವಿವಿಧ ಗ್ರಾಮದ ನೀರಾವರಿ ಮತ್ತು ಅಚ್ಚಕಟ್ಟು ಪ್ರದೇಶದ ಕೊನೆಯ ಭಾಗದ ರೈತರು ನೀರಾವರಿ ಹಾಗೂ ಮಳೆ ಆಶ್ರಿಯ ಬೆಳೆ ಬೆಳೆಯಲು ಜಮೀನಿಗೆ ಬೀಜ ಬಿತ್ತನೆ ನಡೆಸಿ ಕಂಗಾಲಾಗಿದ್ದಾರೆ. ಪ್ರತಿ ಎಕರೆಗೆ ಏಳರಿಂದ ರಿಂದ ಎಂಟು ಸಾವಿರ ವರೆಗೆ ಖರ್ಚಾಗಿದೆ. ಸಸಿಯ ತಾತ್ಕಾಲಿಕ ರಕ್ಷಣೆಗಾಗಿ ನೀರು ಹಾಕಲಿಕ್ಕೆ ಎಕರೆಗೆ ಅಂದಾಜು ಆರು ಸಾವಿರ ವೆಚ್ಚ ಭರಿಸಿದ್ದಾರೆ. ಎಚ್ಎಲ್ಸಿ ಕಾಲುವೆಗೆ ನೀರು ಹರಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಆಗಸ್ಟ್ 3ರಂದು ನಡೆಯಬೇಕಿದ್ದ ತುಂಗಭದ್ರಾ ಮಂಡಳಿ ಸಭೆ ಮೂಂದೂಡಿರುವುದು ರೈತರ ಅತಂಕ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.