ಗುರುವಾರ , ಏಪ್ರಿಲ್ 15, 2021
28 °C

ಮಳೆ ಆರ್ಭಟಕ್ಕೆ 51 ಕುರಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ತಾಲ್ಲೂಕಿನ ಕಂದಗಲ್ಲ-ಪುರ, ಹೊಳಗುಂದಿ, ಬಾವಿಹಳ್ಳಿ ಮತ್ತು ಪಟ್ಟಣದ ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಹಳ್ಳದ ಬದಿಯಲ್ಲಿ ಹೊಲಗಳಲ್ಲಿ ಒಟ್ಟು 51ಕುರಿಗಳು ಮೃತಪಟ್ಟಿವೆ.

ಹೊಳಗುಂದಿ, ಬಾವಿಹಳ್ಳಿ ಗ್ರಾಮದಲ್ಲಿ 18, ಕಂದಗಲ್ಲ-ಪುರದಲ್ಲಿ 23 ಮತ್ತು ಹಡಗಲಿ ಪಟ್ಟಣದ ಹೊರವಲಯದಲ್ಲಿ 30 ಸೇರಿ 51 ಕುರಿಗಳು ಮೃತಪಟ್ಟಿವೆ.ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದ ಬದಿಯಲ್ಲಿನ ಹೊಲಗಳಲ್ಲಿ ಮೃತಪಟ್ಟಿರುವ ಕುರಿಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸಿರಿಗಾವ್ ಮತ್ತು ಚಿಂಚಣಗಿ ಗ್ರಾಮದ ಶಂಕ್ರಪ್ಪ, ಕಲ್ಲಪ್ಪ ಮತ್ತು ಮುರುಸಿದ್ದ ಎಂಬುವವರಿಗೆ ಸೇರಿದ್ದವು. ಹೊಲಗಳಲ್ಲಿ ಕುರಿಗಳನ್ನು ನಿಲ್ಲಸಿದಾಗ ಘಟನೆ ಸಂಭವಿಸಿದೆ.ಮಳೆಯಿಂದ ಹಳ್ಳ ತುಂಬಿ ಹರಿದು 50ಕ್ಕೂ ಹೆಚ್ಚು ಕುರಿಗಳು ಕೊಚ್ಚಿಕೊಂಡು ಹೋಗಿವೆ ಎಂದು ಕುರಿಗಳ ಮಾಲಿಕ ಶಂಕ್ರಪ್ಪ ಮನನ್ನೊಂದು ನುಡಿದಿದ್ದಾನೆ.ಪಿಎಸ್‌ಐ ಆಂಜಿನೇಯ ಮತ್ತು ಸಿಬ್ಬಂದಿ 3 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.