ಶನಿವಾರ, ಮೇ 8, 2021
26 °C

ಮಳೆ: ಕೊಚ್ಚಿ ಹೋದ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ನಗರ ಹಾಗೂ ಸುತ್ತಮುತ್ತ ಬುಧವಾರ ರಾತ್ರಿ ಸಿಡಿಲು ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ರಾತ್ರಿ ಸುಮಾರು ಒಂದು ಗಂಟೆಗೆ ಆರಂಭವಾದ ಮಳೆಯು ಸುಮಾರು ಒಂದೂವರೆ ಗಂಟೆ ಆರ್ಭಟಿಸಿತು. ಆಸ್ತಿ ಅಥವಾ ಜೀವ ಹಾನಿಯಾದ ಬಗ್ಗೆ ಇನ್ನೂವರೆಗೆ ವರದಿಯಾಗಿಲ್ಲ.



ಬಾಗವಾನ ಗಲ್ಲಿಯ ಸಮೀಪವಿರುವ ಹಳ್ಳದ ಮೇಲೆ ಹೊಸದಾಗಿ ನಿರ್ಮಿಸಿದ ಸೇತುವೆ ಮಾತ್ರ ಮಳೆಯಲ್ಲಿ ಕೊಚ್ಚಿ ಹೋಗಿದೆ.

ಬುಧವಾರ ರಾತ್ರಿ ಮಳೆಯಾಯಿತಾ ದರೂ ಗುರುವಾರ ಕಾಣಸಿಗಲಿಲ್ಲ. ಗುರುವಾರ ತುಸು ಹೊತ್ತು ದಟ್ಟ ಮೋಡಗಳು ಕವಿದಿದ್ದರೂ ರಾತ್ರಿಯವ ರೆಗೂ ಮಳೆಯಾಗಲಿಲ್ಲ.



ಆಸ್ತಮಾ: ಔಷಧಿ ವಿತರಣೆ ನಾಳೆ

ಮುನವಳ್ಳಿ:   ಮೃಗಶಿರಾ ಮಳೆ ಇದೇ  8ರಂದು  ಆರಂಭಗೊಳ್ಳಲಿದ್ದು, ಬೆಳಿಗ್ಗೆ 7-55 ರಿಂದ ಸಂಜಜೆ 5ರ ವರೆಗೆ ಆಸ್ತಮಾ ರೋಗಿಗಳಿಗೆ ಉಚಿತ ಔಷಧಿ ಡಾ. ನಜೀರಅಹ್ಮದ್ ತಾಸೇದ್  ಅವರ ದವಾಖಾನೆಯಲ್ಲಿ ನೀಡಲಾಗುವುದು. ಆಸ್ತಮಾ ರೋಗಿಗಳು ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.