ಗುರುವಾರ , ಮೇ 13, 2021
18 °C

ಮಳೆ, ಗಾಳಿ: ರಸ್ತೆಗೆ ಉರುಳಿದ ಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಮಳೆ, ಗಾಳಿಯಿಂದಾಗಿ ಮಸ್ಕಿ, ಕವಿತಾಳ ರಸ್ತೆಯ ಮೇಲೆ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ 5 ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.ಇದರಿಂದಾಗಿ ಈ ರಸ್ತೆ ಮಾರ್ಗವಾಗಿ ಕವಿತಾಳ, ಸಿರವಾರ, ರಾಯಚೂರು ಕಡೆ ಪ್ರಯಾಣಿಸುವ ಪ್ರಯಾಣಿಕರು ಗಂಟೆಗಳ ಕಾಲ ಪರದಾಡುವಂತಾಯಿತು.ಕೆಲವು ಪ್ರಯಾಣಿಕರು 20 ಕಿ.ಮೀ. ಸುತ್ತಿಬಳಸಿ ಪ್ರಯಾಣ ಮಾಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ರಸ್ತೆ ಮೇಲೆ ಬಿದ್ದಿರುವ ಮರವನ್ನು ಕಡೆದು ಸುಗಮಗೊಳಿಸಿದರು.ಮಳೆಯಿಂದಾಗಿ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರು ಸಂಗ್ರಹವಾಗಿ ವಿದ್ಯಾರ್ಥಿಗಳು ಹೊರ ಬರಲು ಹರಸಾಹಸ ಪಡಬೇಕಾಯಿತು. ಗಾಂಧಿನಗರದ 13ನೇ ವಾರ್ಡ್ ಹಾಗೂ ಸೋಮನಾಥ ನಗರದ ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.