ಸೋಮವಾರ, ಏಪ್ರಿಲ್ 19, 2021
29 °C

ಮಸೂದೆ ಅಂಗೀಕರಿಸಿದರಷ್ಟೇ ಸಾಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿವಾದಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ನಿಯಂತ್ರಣ ಹೋರಾಟದ ಕಿಡಿಯನ್ನು ಹಬ್ಬಿಸಿದ್ದು ಸ್ತುತ್ಯಾರ್ಹ. ದಿನಬೆಳಗಾದರೆ ಪತ್ರಿಕೆಗಳಲ್ಲಿ ಭ್ರಷ್ಟಾಚಾರ ತಾಂಡವ ನೃತ್ಯದ ಹಗರಣಗಳು ಸುದ್ದಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಸರಿಪಡಿಸಲಾಗದಷ್ಟು ದೋಷ ಇರುವುದು ಗೋಚರವಾಗುತ್ತದೆ. ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿದೆ. ಭ್ರಷ್ಟಾಚಾರ ಎಷ್ಟು ಹೆಚ್ಚಿದೆ ಎಂದರೆ ಅಭಿವೃದ್ಧಿಗಿಂತ ಹಗರಣಗಳ ಸರಮಾಲೆ ಜಾಸ್ತಿಯಾಗಿದೆ. ಅನೇಕ ಕಾರ್ಯಕ್ರಮಗಳು ನಾಯಕರನ್ನು ಓಲೈಸುವ ಸಾಧನಗಳಾಗಿ ಬಳಸುತ್ತಿರುವುದು ಇಂದು ರಹಸ್ಯವಾಗೇನೂ ಉಳಿದಿಲ್ಲ. ಕೇಂದ್ರ ಸರ್ಕಾರ ಭ್ರಷ್ಟಾಚಾರದ ಪಿಡುಗಿಗೆ ಕಡಿವಾಣ ಹಾಕುವ ದಿಸೆಯಲ್ಲಿ ‘ಜನಲೋಕಪಾಲ’ ಮಸೂದೆಯನ್ನು ಅಂಗೀಕಾರಕ್ಕಾಗಿ ಸಂಸತ್ತಿನಲ್ಲಿ ಮಂಡಿಸಿ ಜಾರಿಗೆ ತರುವ ನಿರ್ಧಾರ ಸ್ವಾಗತಾರ್ಹ ಕ್ರಮ.ರಾಜ್ಯ ಹಾಗೂ ಕೇಂದ್ರದಲ್ಲಿ ಅಭಿವೃದ್ಧಿಗಾಗಿ ನಿಗದಿಯಾದ ಬಹುಪಾಲು ಹಣ ರಾಜಕಾರಣಿಗಳು, ದಲ್ಲಾಳಿಗಳು ಹಾಗೂ ಅಧಿಕಾರಿಗಳ ಜೇಬು ಸೇರುತ್ತಿದೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಾನೂನುಗಳೇನೋ ಸಾಕಷ್ಟಿವೆ. ಆದರೆ ಆಡಳಿತದಲ್ಲಿ ಪಾರದರ್ಶಕತೆ ತರುವ ಯತ್ನಗಳು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರಿಗಳನ್ನು ಶಿಕ್ಷಿಸಲು ಜಾರಿಗೆ ತರಲು ಹೊರಟಿರುವ ಜನಲೋಕಪಾಲ ಮಸೂದೆ ಪಾರದರ್ಶಕವಾಗಿ ಸಂಪೂರ್ಣ ಸ್ವಾಯತ್ತತೆ ಹೊಂದಿ ಹೆಚ್ಚಿನ ಅಧಿಕಾರ ಹೊಂದಿ ಸಬಲವಾಗಿ ರೂಪುಗೊಳ್ಳಬೇಕು.ಹಾಗಾದರೇ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ನಮ್ಮಲ್ಲಿ ರೂಪಿಸಿರುವ ಕಾನೂನಿನಡಿಯಲ್ಲಿ ನುಸುಳಿ ಪಾರಾಗುತ್ತಿರುವ ಘಟಾನುಘಟಿ ಭ್ರಷ್ಟರು ಇದ್ದಾರೆ. ಪ್ರಸ್ತುತ ಜಾರಿಗೆ ತರಲಿರುವ ಜನಲೋಕಪಾಲ್ ಮಸೂದೆ ಬೆಟ್ಟ ಅಗೆದು ಇಲಿ ಹಿಡಿದರೆಂಬಂತೆ ಆಗಬಾರದು. ಎಲ್ಲಾ ರಾಜಕೀಯ ಪಕ್ಷಗಳು ಮಸೂದೆ ಬಗ್ಗೆ ಅಪಸ್ವರ ಎತ್ತದೆ ಒಮ್ಮತದಿಂದ ಸಹಕರಿಸಿ ನೈತಿಕ ಬೆಂಬಲ ನೀಡುವುದು ಅಷ್ಟೇ ಮುಖ್ಯವಾಗಿದೆ.

            

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.