ಮಂಗಳವಾರ, ಮೇ 11, 2021
24 °C
ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನೆ

`ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಕ್ಕೆ ಚಿಂತನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ರೈತರು ಬೆಳೆದ ತರಕಾರಿಗಳನ್ನು ಸಂರಕ್ಷಿಸಲು ಶಿವಪುರದ ಗುರು ಬಸವ ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಿಸಲು ಚಿಂತನೆ ನಡೆದಿದೆ ಎಂದು ಧಾರವಾಡ ಮನುಗುಂಡಿ ಹಾಗೂ ಶಿವಪುರ ಗುರುಬಸವ ಮಹಮನೆಯ ಪೀಠಾಧ್ಯಕ್ಷ ಬಸವಾನಂದ ಸ್ವಾಮೀಜಿ ಹೇಳಿದರು.ಹಳೇಬೀಡು ಅಡಗೂರು ಮಧ್ಯದಲ್ಲಿರುವ ಶಿವಪುರದ ಗುರುಬಸವ ಮಹಾಮನೆ ವೈದ್ಯ ಸಂಗಣ್ಣ ನಿಸರ್ಗೋಪಚಾರ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ನಡೆದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನಾ ಸಮಾರಂಭ, 14ನೇ ಶಿವಾನುಭವ ಗೋಷ್ಠಿಯಲ್ಲಿ  ಮಾತನಾಡಿದರು.ಹಾಸನ ಜಿಲ್ಲೆಯಲ್ಲಿ ಮಾದಿಹಳ್ಳಿ ಹಳೇಬೀಡು ಹೋಬಳಿಗಳು ತರಕಾರಿ ಬೆಳೆಗೆ ಖ್ಯಾತಿ ಪಡೆದಿವೆ. ತರಕಾರಿಯನ್ನು ಸಂರಕ್ಷಿಸಿ ರೈತರಿಗೆ ಶ್ರಮಕ್ಕೆ ತಕ್ಷ ಪ್ರತಿಫಲ ನೀಡುವ ಕೆಲಸ ಆಗಬೇಕಾಗಿದೆ ಎಂದರು.ನೀರಿನ ಸದ್ಬಳಕೆಯ ದೃಷ್ಟಿಯಿಂದ ಧಾರವಾಡದ ಮನುಗುಂಡಿಯ ಮಹಮನೆಯಲ್ಲಿ ಮಳೆಕೊಯ್ಲು ಮಾಡಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಶಿವಪುರದಲ್ಲಿ ನಿರ್ಮಿಸುವ ಶೈತ್ಯಾಗಾರದ ಕೆಳಗೆ ಮಳೆ ನೀರು ಸಂಗ್ರಹಿಸಿ ಮಹಾಮನೆಯಲ್ಲಿ ಬಳಕೆ ಮಾಡಲಾಗುವುದು ಎಂದು ಬಸವಾನಂದ ಸ್ವಾಮೀಜಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.