ಮಹಾಮಾಯೆಯ ನೆನೆದು ಧನ್ಯರಾದ ಜನ

5

ಮಹಾಮಾಯೆಯ ನೆನೆದು ಧನ್ಯರಾದ ಜನ

Published:
Updated:

ಬಾಗಲಕೋಟೆ: ಜಿಲ್ಲಾದ್ಯಂತ ಸಡಗರ ಸಂಭ್ರಮ ದಿಂದ ನಾಡ ಹಬ್ಬ ದಸರಾವನ್ನು ಆಚರಿಸ ಲಾಯಿತು.

ಬುಧವಾರ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಆಯುಧ ಪೂಜೆ ಮತ್ತು ವಿಜಯದಶಮಿಯ ಪ್ರಯುಕ್ತ ಮಾರುಕಟ್ಟೆಯಲ್ಲಿ ಬನ್ನಿ, ಆರಿ, ಜೋಳದ ದಂಟು, ಚಂಡು ಹೂವು, ಹಣ್ಣುಗಳ ವ್ಯಾಪಾರ ಜೋರಾಗಿ ಸಾಗಿತ್ತು.ನಗರದ ಬುರ್ಲಿ ಲೇಔಟ್‌ನಲ್ಲಿರುವ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.

ವಿಜಯದಶಮಿ ಪ್ರಯುಕ್ತ ಗುರುವಾರ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು. ನಗರದ ವಿವಿಧ ದೇವಾಲ ಯಗಳಲ್ಲಿ ಬೆಳಿಗ್ಗೆಯಿಂದ ಪೂಜೆ ಪುನಸ್ಕಾರಗಳು ನಡೆದವು.ನವನಗರದ ಮಹಾಲಕ್ಷ್ಮೀ (ಕೋರಮ್ಮ) ದೇವಾಲಯದ ಆವರಣದಲ್ಲಿ ಬನ್ನಿ ಕಟ್ಟೆಗೆ ಆಗಮಿಸಿದ ಭಕ್ತರು ಬನ್ನಿ, ಆರಿ ಸಮರ್ಪಿಸಿದರು. ನಗರದ ಬಿವಿವಿ ಸಂಘದ ಆವರಣದಲ್ಲಿರುವ ಬನ್ನಿ ಗಿಡಕ್ಕೆ ವಿಜಯದಶಮಿಯಂದು ಪೂಜೆ ಸಲ್ಲಿಸಿ, ಬನ್ನಿ ಆರಿ ಕೊಟ್ಟು ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಅಂಬಾಭವಾನಿ ದೇವಾ ಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಅಲಂಕಾರ ಮಾಡಲಾಗಿತ್ತು.ಕುಂಭ ಮೆರವಣಿಗೆ: ನಗರದ ಲಕ್ಷ್ಮಿ ದೇವಾಲಯದಲ್ಲಿ ದಸರಾ ಪ್ರಯುಕ್ತ ಜಾತ್ರೆ ನಡೆ ಯಿತು. ಜಾತ್ರೆಯ ಅಂಗವಾಗಿ ಮಹಿಳೆಯರಿಂದ  ಕುಂಭದ ಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry