ತಾಳಿಕೋಟೆ: ಜಗತ್ತನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳವ ಉದ್ದೇಶ ದಿಂದ ಭಯೋತ್ಪಾದಕ ಶಕ್ತಿಗಳು ನಡೆಸು ತ್ತಿರುವ ಹಿಂಸಾತ್ಮಕ ಕೃತ್ಯಗಳ ಈ ಸಂದರ್ಭದಲ್ಲಿ ಶಾಂತಿ, ಸತ್ಯ, ಅಹಿಂಸೆಯ ಪ್ರತಿಪಾದಕ ಮಹಾವೀರರ ತತ್ವಗಳ ಆಚರಣೆ ಪರಿಹಾರವಾಗಿ ಕಾಣಿಸುತ್ತಿವೆ ಎಂದು ಆರ್.ಬಿ. ದಮ್ಮೂರಮಠ ಹೇಳಿದರು.

ಸ್ಥಳೀಯ ರಾಜವಾಡೆಯಲ್ಲಿರುವ ಆದಿನಾಥ ಜಿನಮಂದಿರದಲ್ಲಿ ಈಚೆಗೆ ನಡೆದ ಸ್ಥಳೀಯ ಜೈನ ಸಮುದಾಯದ ವತಿಯಿಂದ ಆಯೋಜಿ ಸಿದ್ದ ಮಹಾವೀರ ತೀರ್ಥಂಕರರ 2611ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಷ್ಟೇ ಅಲ್ಲದೇ ನೆಲ್ಸನ್ ಮಂಡೆಲಾ, ಗಾಂಧೀಜಿ ಜೈನ ಧರ್ಮದ ತತ್ವಗಳನ್ನೇ ಪ್ರತಿಪಾದಿಸಿದರು ಎಂದು ಹೇಳಿದರು.

ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಆದಪ್ಪ ಕಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜೀವರಾಜ ಪ್ರಥಮಶೆಟ್ಟಿ, ಗಂಗಣ್ಣ ಸುರಪುರ, ಚಂದ್ರನಾಥ ಸುರಪುರ, ಶಿಕ್ಷಕ ಅಶೋಕ ಹಂಚಲಿ, ಚಂದ್ರನಾಥ ಉಪಾಧ್ಯ ವೇದಿಕೆಯ ಮೇಲೆ ಹಾಜರಿದ್ದರು.

ಸಮಾಜದ ಅಧ್ಯಕ್ಷ ಪದ್ಮರಾಜ ಯಾತಗಿರಿ, ಉಪಾಧ್ಯಕ್ಷ ಪಾರೀಶ್ವನಾಥ ಧನಪಾಲ, ಬಾಬು ಪ್ರಥಮಶೆಟ್ಟಿ, ಹೊಂಬಣ್ಣ ಸುರಪುರ, ಸುರೇಶ ದೇವೂರ, ಬಾಬಹುಬಲಿ ಸುರಪುರ, ನೇಮಿನಾಥ ಧನಪಾಲ, ಮೋಹನ ಧನಪಾಲ, ಜಿನ್ನಪ್ಪ ಪ್ರಥಮಶೆಟ್ಟಿ, ಚನ್ನಪ್ಪ ಪ್ರಥಮಶೆಟ್ಟಿ, ಪದ್ಮರಾಜ ಐವರ, ಕುಲಭೂಷಣ ಹುಬ್ಬಳ್ಳಿ, ಶಾಂತಿನಾಥ ಹುಬ್ಬಳ್ಳಿ, ಮಹಾವೀರ ಸೇಡಂ, ದೇವೀಂದ್ರ ಪ್ರಥಮಶೆಟ್ಟಿ, ಚೂಡಾಮಣಿ ಗೋಗಿ, ಶಾಂತಿನಾಥ ಸುರಪುರ, ಗುಂಡೂರಾವ್ ಧನಪಾಲ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಕುಂಭ ಕಳಸ ಹಾಗೂ ಭಗವಾನ್ ಮಹಾವೀರಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸುತ್ತಮುತ್ತಲ ಗ್ರಾಮದ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ನಂತರ ರಾಜವಾಡೆಯಲ್ಲಿರುವ ಜಿನಮಂದಿರದಲ್ಲಿ ಭಗವಾನ್ ಮಹಾವೀರ ಮೂರ್ತಿಗೆ ಪಂಚಾಮೃತ ಅಭಿಷೇಕ ಮತ್ತು ಅಷ್ಟದ್ರವ್ಯ ಪೂಜೆ ನೆರವೇರಿಸಲಾಯಿತು. ಪ್ರಕಾಶ ಸುರಪುರ ಸ್ವಾಗತಿಸಿದರು. ವಿಧ್ಯಾಧರ ಯಾತಗಿರಿ ನಿರ್ವಹಿಸಿದರು. ಅಜಿತ ಸುರಪುರ ವಂದಿಸಿದರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಆದಿನಾಥ ಉಪಾಧ್ಯ ಹಾಗೂ ಪ್ರಕಾಶ ಸುರಪುರ, ಬಸದಿಯ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಲಲಿತಾಬಾಯಿ ಸುರಪುರ, ಸುರೇಶ ದೇವೂರ, ನಿರ್ಮಲಾ ಬಾಯಿ ಪ್ರಥಮಶೆಟ್ಟಿ ಹಾಗೂ ಆದಪ್ಪ ಹೂವಿನಹಳ್ಳಿರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.