ಸೋಮವಾರ, ಮಾರ್ಚ್ 8, 2021
32 °C

ಮಹಾ ಫಲಿತಾಂಶ ಪ್ರಜಾವಾಣಿ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾ ಫಲಿತಾಂಶ ಪ್ರಜಾವಾಣಿ ವಿಶೇಷ

ಇಂದು (ಮೇ 16) 16ನೇ ಲೋಕ­­ಸಭಾ ಚುನಾವಣೆಯ ಫಲಿ­ತಾಂಶ ಪ್ರಕಟವಾಗುತ್ತಿರುವ ದಿನ. 67 ವರ್ಷಗಳ ಇತಿಹಾಸ ಇರುವ ನಾಡಿನ ಸಾಕ್ಷಿಪ್ರಜ್ಞೆ­ಯಂತಿರುವ ‘ಪ್ರಜಾವಾಣಿ’ ವಿಶ್ವಾಸಾರ್ಹ, ಗುಣ­ಮಟ್ಟದ ಸುದ್ದಿಗಳನ್ನು ನೀಡುವಲ್ಲಿ ಸದಾ ಮುಂದು.ಈ ಬಾರಿಯೂ ಓದುಗರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಫಲಿ­ತಾಂಶದ ವೈವಿಧ್ಯಮಯ ಸುದ್ದಿ­ಗಳು, ತಜ್ಞರ ವಿಶ್ಲೇಷಣೆ­ಗಳನ್ನು ವರ್ಣಮಯ ವಿನ್ಯಾಸ­ದೊಂದಿಗೆ ಪತ್ರಿಕೆ ಪ್ರಸ್ತುತಪಡಿಸಲಿದೆ.ಇತಿಹಾಸಕಾರ ರಾಮಚಂದ್ರ ಗುಹಾ, ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ, ರಾಜಕೀಯ ವಿಶ್ಲೇಷಕ ಸಂದೀಪ್‌ ಶಾಸ್ತ್ರಿ, ಉದ್ಯಮಿ ಕ್ಯಾಪ್ಟನ್‌ ಜಿ.ಆರ್‌.­ಗೋಪಿನಾಥ್, ಪತ್ರಕರ್ತರಾದ ಮದನ ಮೋಹನ, ಬೇಳೂರು ಸುದರ್ಶನ,  ಲೇಖಕಿ ಪ್ರತಿಭಾ ನಂದಕುಮಾರ್‌, ಅನಿವಾಸಿ ಭಾರತೀಯ ಸುಧೀಂದ್ರ ಬುದ್ಯ  ಮತ್ತಿತರರ ವಿಶ್ಲೇಷಣಾತ್ಮಕ ಲೇಖನಗಳು ಶನಿವಾರದ ಸಂಚಿಕೆಯ ವಿಶೇಷ.ಪ್ರತಿಷ್ಠಿತ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ಹಾಗೂ ವಿಭಜನೆಯ ಹೊಸ್ತಿಲಲ್ಲಿ ಇರುವ ತೆಲಂಗಾಣ, ಸೀಮಾಂಧ್ರ­ದಲ್ಲಿ ಸಂಚರಿಸಿ ಸಾಕ್ಷಾತ್‌ ಸಮೀಕ್ಷೆ ನಡೆಸಿದ್ದ ನಮ್ಮ ಹಿರಿಯ ಪ್ರತಿನಿಧಿ­ ಹೊನಕೆರೆ ನಂಜುಂಡೇಗೌಡ,ಎನ್‌. ಉದಯ್‌ ಕುಮಾರ್‌ ಹಾಗೂ ರವೀಂದ್ರ ಭಟ್ಟ ಅವರ ಚುನಾವಣೋತ್ತರ ಸಮೀಕ್ಷೆಗಳೂ ಪ್ರಕಟವಾಗಲಿವೆ.                                                                                      – ಸಂಪಾದಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.