ಗುರುವಾರ , ಫೆಬ್ರವರಿ 25, 2021
19 °C

ಮಹಿಮಾಗೆ ಮೂರು ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಮಾಗೆ ಮೂರು ಪ್ರಶಸ್ತಿ

ಉಡುಪಿ: ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಮಹಿಮಾ ಅಗರವಾಲ್, ನಗರದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈವ್ ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬುಧವಾರ ಕಿರಿಯರ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡು ಗಮನ ಸೆಳೆದರು.ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಈ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಮಹಿಮಾ 25-23, 17-21, 21-18 ರಿಂದ ಶಿಖಾ ಗೌತಮ್ ವಿರುದ್ಧ ಜಯಗಳಿಸಿದಳು. ಡಬಲ್ಸ್‌ನಲ್ಲಿ ಶಿಖಾ ಜತೆಗೂಡಿದ ಮಹಿಮಾ 21-10, 21-18ರಲ್ಲಿ ಮೇಘನಾ ಕುಲಕರ್ಣಿ ಮತ್ತು ರಚಿತಾ ಪಾಟೀಲ್ ಜೋಡಿಯನ್ನು ಮಣಿಸಿದರು.ಆದರೆ 15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಶಿಖಾ 21-19, 21-12ರಲ್ಲಿ ಮಹಿಮಾ ವಿರುದ್ಧ ಜಯಗಳಿಸಿ ಸೇಡು ತೀರಿಸಿಕೊಂಡಳು. ಡಬಲ್ಸ್ ಫೈನಲ್‌ಲ್ಲಿ ಶಿಖಾ- ಮಹಿಮಾ ಮತ್ತೆ ಜತೆಯಾಗಿ 21-19, 21-15ರಲ್ಲಿ ಅಪೇಕ್ಷಾ ನಾಯಕ್ ಮತ್ತು ಅರ್ಚನಾ ಪೈ ಜೋಡಿಯನ್ನು ಹಿಮ್ಮೆಟ್ಟಿಸಿತು.17 ವರ್ಷಗೊಳಗಿನ ಬಾಲಕರ ಫೈನಲ್‌ನಲ್ಲಿ ಎಸ್. ಡೇನಿಯಲ್ ಫರೀದ್ 21-7, 21-11ರಲ್ಲಿ ಆಕಾಶರಾಜ್ ಮೂರ್ತಿ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಡಬಲ್ಸ್‌ನಲ್ಲಿ ಹರ್ಷಿತ್ ಅಗರ್‌ವಾಲ್ ಮತ್ತು ಬಿ.ಆರ್. ಸಂಕೀರ್ತ್ ಜೋಡಿ 21-12, 21-10ರಲ್ಲಿ ಕೆ. ಲೋಕಸಾಯಿನಾಥ್ ಮತ್ತು ಎಂ. ಮದುಸೂಧನ್ ಜೋಡಿಯನ್ನು ಸೋಲಿಸಿತು.ರಾಹುಲ್, ಮಿಥುಲಾಗೆ ಡಬಲ್: ಬಿ.ಎಂ.ರಾಹುಲ್ ಭಾರದ್ವಾಜ್ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ 21- 12, 19-21, 21-16ರಲ್ಲಿ ಮಿಥುನ್ ಮಂಜುನಾಥ್ ವಿರುದ್ಧ ಜಯಗಳಿಸಿದರು. ಡಬಲ್ಸ್‌ನಲ್ಲಿ ಮಿಥುನ್- ಎಂ.ರಘು ಜೋಡಿ 21-15, 21-19ರಲ್ಲಿ ಆದಿತ್ಯ ಎಲ್.ಭಟ್ ಮತ್ತು ಗ್ಲಾನಿಷ್ ಆಶ್ಲೆ ಪಿಂಟೊ ಅವರನ್ನು ಸೋಲಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.