ಸೋಮವಾರ, ಜೂನ್ 14, 2021
26 °C

ಮಹಿಳಾ ಉದ್ಯಮಿ ಸಾಧನೆ: ಫಾರ್ಚೂನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಯಾವುದೇ ಉದ್ಯಮದ ಮನೆತನ ಅಥವಾ ಅನು ಭವದ ಹಿನ್ನೆಲೆ ಇಲ್ಲದೆಯೇ, ಹೊಸ ಕಂಪೆನಿ(ಸ್ಟಾರ್ಟ್‌­­ಅಪ್‌) ಸ್ಥಾಪಿಸಿ, ಈಗ ಲಾಭದಾಯ­ಕವಾಗಿ ಮುನ್ನಡೆಸು­ತ್ತಿ ರುವ 40 ವರ್ಷ­ದೊಳಗಿನ 40 ಉದ್ಯ ಮಿ­ಗಳ ಪಟ್ಟಿ­ಯನ್ನು ಪಾರ್ಚೂನ್‌ ಇಂಡಿಯಾ ಪ್ರಕಟಿಸಿದೆ.ಈ ಪಟ್ಟಿಯಲ್ಲಿ ಏಳು ಮಹಿಳಾ ಉದ್ಯಮಿಗಳೂ ಸ್ಥಾನ ಪಡೆದಿ­ರುವುದು ವಿಶೇಷ.

‘ಇದು ಹೊಸ ಹಾಗೂ ಭಿನ್ನ ಸ್ವರೂಪದ ಯೋಜನೆಗ­ಳೊಂದಿಗೆ ಮಾರುಕಟ್ಟೆ ಪ್ರವೇಶಿಸಿ ಯಶಸ್ವಿ­­ಯಾ­ದ ಉದ್ಯಮಿಗಳ ಪಟ್ಟಿ. ಉದ್ಯಮಿಗಳಿಗೆ ನೀಡಿರುವ ಶ್ರೇಣಿ ಅಲ್ಲ. ಅಲ್ಲದೇ, ಉದ್ಯಮ ನಿರತ ಕುಟುಂಬದಿಂ­ದ ಬಂದ ವ್ಯಕ್ತಿಗಳೂ ಈ ಪಟ್ಟಿಯಲ್ಲಿಲ್ಲ ಎಂದೂ ಫಾರ್ಚೂನ್‌ ಇಂಡಿಯಾ ಸ್ಪಷ್ಟಪಡಿಸಿದೆ.ಬೆಂಗಳೂರು ಮೂಲದ ‘ಥೆರಾಮೈಟ್‌ ನೊವೊಬಯೊ­ಲಾಜಿಕ್ಸ್‌’ ನಿರ್ದೇಶಕಿ  ಕವಿತಾ ಅಯ್ಯರ್‌ ರೋಡ್ರಿಗಸ್‌, ‘ಜಿವೆಮ್‌ ಡಾಟ್‌ಕಾಂ’ ಸ್ಥಾಪಕಿ ಮತ್ತು ‘ಸಿಇಒ’ ರಿಚಾ ಖರ್‌, ‘ಗ್ಲೋಬಲ್‌­ಸ್ಪಾಟ್’ ಕಂಪೆನಿ ‘ಸಿಇಒ’ ಕವಿತಾ ಭೂಪತಿ ಚಡ್ಡಾ, ‘ಫಾಸ್ಟ್‌ಟ್ರಾಕ್‌ ಅಂಡ್‌ ನ್ಯೂ ಬ್ರಾಂಡ್‌’ನ ಭಾರತೀಯ ಮಾರುಕಟ್ಟೆ ಮುಖ್ಯಸ್ಥೆ ಸಿಮ್ರನ್‌ ಭಾಷಿನ್‌, ‘ಮೈದಾಸ್‌’ ಕಂಪೆನಿ ಸ್ಥಾಪಕಿ ಗೌರಿ ಸಿಂಗ್‌, ‘ಟಾಟಾ ಸ್ಟಾರ್‌ ಬಕ್ಸ್‌’ನ  ‘ಸಿಇಒ’ ಆವನಿ ಸಗ್ಲಾನಿ ದೇವ್ಡಾ,  ‘ಇಂಡಿಯಾ ಆರ್ಟ್‌ಫೇರ್‌’ ಸ್ಥಾಪಕಿ ನೇಹಾ ಕೃಪಾಲ್‌ ಪಟ್ಟಿಯ­ಲ್ಲಿರುವ ವಿಶಿಷ್ಟ ಸಾಧನೆಯ ಮಹಿಳಾ ಉದ್ಯಮಿಗಳು.ಈ ಕಂಪೆನಿಗಳ ಸರಾಸರಿ ಪ್ರಗತಿ, ಲಾಭಾಂಶ, ಮಾರುಕಟ್ಟೆ ಮೌಲ್ಯ, ಸೇವಾ ಗುಣಮಟ್ಟ ಮೊದಲಾದ ಅಂಶಗಳನ್ನು ಆಧರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ.ಇ–ಕಾಮರ್ಸ್‌ ತಾಣ ಫ್ಲಿಪ್‌­ಕಾರ್ಟ್‌ನ ಸ್ಥಾಪಕರಾದ ಸಚಿನ್‌ ಮತ್ತು ಬಿನ್ನಿ ಬನ್ಸಾಲ್‌, ಟ್ಯಾಕ್ಸಿ ಫಾರ್‌ ಷ್ಯೂರ್‌ ಸಂಸ್ಥೆಯ ಸ್ಥಾಪಕರಾದ ಅಪ್ರಮೇಯ ರಾಧಾ ಕೃಷ್ಣ ಮತ್ತು ರಘುನಂದನ್‌ ಜಿ, ಇನ್‌ಮೊಬಿ ಕಂಪೆನಿಯ ‘ಸಿಇಒ’ ನವೀನ್‌ ತಿವಾರಿ, ಜಬಂಗ್‌ ಡಾಟ್‌ಕಾಂನ ಅರುಣ್‌ ಮೋಹನ್‌ ಮತ್ತು ಪ್ರವೀಣ್‌ ಸಿನ್ಹಾ ಕೂಡ ಪಟ್ಟಿ ಯಲ್ಲಿರುವ 40 ವರ್ಷದ ಪ್ರಮುಖ ಪುರುಷ ಉದ್ಯಮಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.