ಬುಧವಾರ, ಏಪ್ರಿಲ್ 21, 2021
30 °C

ಮಹಿಳಾ ನಗರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಹಿಳೆಯರಿಗಾಗಿಯೇ ವಿಶೇಷವಾಗಿ ಭೂಪ್ರದೇಶವೊಂದನ್ನು ನಿರ್ಮಿಸಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ.ದೇಶವನ್ನು ಆಧುನಿಕತೆಯಿಂದ ಹೊರತಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಹಿಳಾ ನಗರವೊಂದರ ನಿರ್ಮಾಣಕ್ಕೆ ಸೌದಿ ಕೈಗಾರಿಕಾ ಸಂಪನ್ಮೂಲ ಪ್ರಾಧಿಕಾರವು ಮುಂದಿನ ವರ್ಷ ಚಾಲನೆ ನೀಡಲಿದೆ ಎಂದು ಇಲ್ಲಿನ ಮಾಧ್ಯಮಗಳು ತಿಳಿಸಿವೆ.ನಿರ್ಮಾಣವಾಗಲಿರುವ ಮಹಿಳಾ ನಗರದಲ್ಲಿ ಮಹಿಳೆಯರಿಗೆ ಯಾವುದೇ ಶರಿಯತ್ ಕಾನೂನುಗಳು ಅನ್ವಯವಾಗದೆ ಅವರ ಇಚ್ಛೆಯಂತೆ ಬದುಕಲು ಅವಕಾಶ, ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸಲು ಸ್ವಾತಂತ್ರ್ಯವಿದೆ ಎಂದು ಮೂಲಗಳು ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.