ಶನಿವಾರ, ಜೂನ್ 19, 2021
22 °C

ಮಹಿಳಾ ಪೌರಕಾರ್ಮಿಕರ ಆರೋಗ್ಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ವಿಶ್ವ ಮಹಿಳಾ ದಿನಾಚರ­ಣೆಯ ಅಂಗವಾಗಿ ಅಟ್ಟೂರು ವಾರ್ಡ್‌ ವ್ಯಾಪ್ತಿಯ ದೊಡ್ಡಬೆಟ್ಟಹಳ್ಳಿಯ

ಬಿಬಿ­ಎಂಪಿ­ ಆರೋಗ್ಯ ಕೇಂದ್ರದಲ್ಲಿ  ಬಿಬಿಎಂಪಿ ಮಹಿಳಾ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಶಿಬಿರ ಉದ್ಘಾಟಿಸಿದ ಬಿಬಿಎಂಪಿ ಸದಸ್ಯೆ ಡಾ.ಕೆ.ಎನ್‌. ಗೀತಾ ಶಶಿ­ಕುಮಾರ್‌, ‘ಪೌರಕಾರ್ಮಿಕರು ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಎಲ್ಲರ ಆರೋಗ್ಯ ಕಾಪಾಡುತ್ತಾರೆ. ಆದರೆ, ಅವರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸದೆ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ದಿಸೆ­ಯಲ್ಲಿ ಅವರ ಆರೋಗ್ಯ ರಕ್ಷಣೆಯ ಕಡೆಗೂ ಗಮನ ಹರಿಸಬೇಕು’ ಎಂದರು.ಶಿಬಿರದಲ್ಲಿ ರಕ್ತದೊತ್ತಡ, ಕಣ್ಣಿನ ಪರೀಕ್ಷೆ, ಮಧುಮೇಹ ತಪಾಸಣೆ ನಡೆಸ­ಲಾ­ಯಿತು. 102 ಮಂದಿ ಶಿಬಿರದ ಪ್ರಯೋ­ಜನ ಪಡೆದರು.

ಸರ್ಕಾರಿ ಆಸ್ಪತ್ರೆಯ ಸಾಮಾನ್ಯ ಕಾಯಿಲೆಗಳ ತಜ್ಞ ಡಾ.ಕುಮಾರ್‌, ಅಭಿಷೇಕ್‌ ನೇತ್ರಾಲಯದ ನೇತ್ರತಜ್ಞ ಡಾ.ಹರೀಶ್‌, ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿ ಡಾ.ಮಂಗಳಾಂಬ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪ­ಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.