ಭಾನುವಾರ, ಜೂನ್ 20, 2021
25 °C

ಮಹಿಳಾ ವಿವಿ: ಹಂಗಾಮಿ ಕುಲಪತಿ ನೇಮಕಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿ ಡಾ.ಎಸ್.ಎ. ಖಾಜಿ ಅವರನ್ನು ನೇಮಿಸಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ~ ಎಂದು ಮಹಿಳಾ ವಿವಿಯ ಕಲಾ ನಿಕಾಯದ ಡೀನ್ ಡಾ.ವಿಜಯಶ್ರೀ ಸಬರದ ತಿಳಿಸಿದ್ದಾರೆ.



ಮಹಿಳಾ ವಿವಿಯ ಕುಲ ಪತಿಯಾಗಿದ್ದ ಡಾ.ಗೀತಾ ಬಾಲಿ ಅವರ ಅವಧಿ ಜ.28ರಂದು ಕೊನೆಗೊಂಡಿತ್ತು.  ಹಂಗಾಮಿ ಕುಲಪತಿಯಾಗಿ ಡಾ.ಎಸ್.ಎ. ಖಾಜಿ ಜ.30ರಂದು ನೇಮಕಗೊಂಡಿದ್ದರು.



`ಮಹಿಳಾ ವಿವಿಯ ಎಲ್ಲ ಡೀನ್‌ಗಳು ಜ.22ರಂದು ಸಭೆ ಸೇರಿ, ಜೇಷ್ಠತೆಯಿರುವ ಡೀನ್‌ರನ್ನು ಮಾತ್ರ ಹಂಗಾಮಿ ಕುಲಪತಿಯನ್ನಾಗಿ ನೇಮಿಸಲು ಶಿಫಾರಸು ಮಾಡಬೇಕು ಎಂದು ಕುಲಸಚಿವರಿಗೆ ಪತ್ರ ನೀಡಿದ್ದೆವು. ಆದರೆ, ಡಾ. ಗೀತಾ ಬಾಲಿ ಅವರು ನಮಗಿಂತಲೂ ಕಿರಿಯ ಡೀನ್ ಆಗಿರುವ ಡಾ.ಎಸ್.ಎ. ಖಾಜಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.



`ಈ ಅನ್ಯಾಯ ಸರಿಪಡಿಸಬೇಕೆಂದು ನಾವು ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.



 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.