ಸೋಮವಾರ, ಜೂನ್ 21, 2021
20 °C

ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿ: ಕೂಡಲಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಮಹಿಳೆಯರಲ್ಲಿ ಶಿಕ್ಷಣದ ಪ್ರಮಾಣ ಅಧಿಕಗೊಳಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಿದೆ. ಅಲ್ಲದೆ ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಎಸ್.ಎ. ಕೂಡಲಮಠ ಹೇಳಿದರು.ತಾಲ್ಲೂಕಿನ ತೋರೂರ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರಕಾರಿ ವ್ಯಾಜ್ಯಗಳ ಇಲಾಖೆ, ಕಂದಾಯ, ಶಿಶುಅಭಿವೃದ್ದಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಅಂದಲಗಿ ಗ್ರಾಪಂ.ಆಶ್ರಯದಲ್ಲಿ  ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೆಲವು ಕುಟುಂಬದಲ್ಲಿ ಕಾಣುವ ಸಣ್ಣ-ಪುಟ್ಟ ಸಮಸ್ಯೆಯಿಂದ ದೌರ್ಜನ್ಯಕ್ಕೊಳಗಾಗುವ ಮಹಿಳೆ ಯರು ಕಾನೂನು ತಿಳುವಳಿಕೆಯಿಂದ ನ್ಯಾಯಲ ಯದಲ್ಲಿ ಪರಿಹಾರ ಕಂಡುಕೊಳ್ಳಬಹುದು ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆ ಜೀಗುಪ್ಸೆ ಹೊಂದದೆ ನ್ಯಾಯಲಯಕ್ಕೆ ಮೊರೆ ಹೋಗುವದು ಅಗತ್ಯವಾಗಿದೆ. ಅದರಿಂದ ಮಹಿಳೆಯರಿಗೆ ನಿಜವಾದ ನ್ಯಾಯ ದೂರೆಯಲು ಸಾಧ್ಯವಿದೆ ಎಂದು ಹೇಳಿದರು.ತಾಪಂ ಸದಸ್ಯೆ ಸುಜಾತ ಕಲಕಟ್ಟಿ ಮಾತನಾಡಿ, ಪತಿ-ಪತ್ನಿಯರು ಪರಸ್ಪರ ನಂಬಿಕೆಯಿಂದ ಸಂಸಾರದ ನೌಕೆ ಮುನ್ನುಡೆಸಿದಲ್ಲಿ ಕುಟಂಬದಲ್ಲಿ ಸಣ್ಣ-ಪುಟ್ಟ ಕಲಹಗಳು ಕಣ್ಮರೆಯಾಗಿ, ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಹೇಳಿದರು.ಶಿಗ್ಗಾವಿ ಜೆಎಂಎಫ್‌ಸಿ ನ್ಯಾಯಲಯದ ನ್ಯಾಯಾಧೀಶ ಜಿ.ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕಾನೂನು ತಿಳುವಳಿಕೆ ಮೂಡಿಸಲು ಸರ್ಕಾರ ಆಯೋಜಿಸಿರುವ ಉಚಿತ ಕಾನೂನು ಶಿಬಿರಗಳ ಸದುಪಯೋಗ ಪಡೆಯಬೇಕು. ಅದರಿಂದ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಿದೆ ಎಂದು ಹೇಳಿದರು.ಹಿರಿಯ ವಕೀಲ ಎಸ್.ಕೆ.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಪ್ರಕಾಶ ಬಡಿಗೇರ,ಪಿ.ಆರ್.ಮಾದರ, ಪಿ.ಪಿ.ಹೊಂಡದಕಟ್ಟಿ ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಗ್ರಾ.ಪಂ.ಅಧ್ಯಕ್ಷ ಸಂತೋಷ ವಡ್ಡಮ್ಮನವರ, ತಾಪಂ. ಸದಸ್ಯಸಂಗಪ್ಪ ಜವಳಿ, ವೀಣಾ ಹರಿಜನ, ದೇವಕ್ಕ ವರೂರು, ಎಸ್.ಎಂ. ಕೋತಂಬ್ರಿ, ಮೋಹನ ಬೆಳಗಲಿ, ರವಿ ಬಂಕಾಪುರ, ಯಲ್ಲಪ್ಪ ವಡವಡಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.