ಮಂಗಳವಾರ, ಮಾರ್ಚ್ 2, 2021
31 °C
ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಮತ

ಮಹಿಳೆಯರಲ್ಲಿ ಸೀತೆಯ ದೃಢಸಂಕಲ್ಪ ಮೂಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರಲ್ಲಿ ಸೀತೆಯ ದೃಢಸಂಕಲ್ಪ ಮೂಡಲಿ

ಬೆಂಗಳೂರು: ‘ಸೀತೆ ದೃಢತೆಯ ಸಂಕಲ್ಪ. ಅಂತಹ ದೃಢ ಮನೋಭಾವ ಎಲ್ಲ ಹೆಣ್ಣು ಮಕ್ಕಳಲ್ಲಿ ಬೆಳೆಯಬೇಕು’ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.ಜಲಮಂಡಳಿಯ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.‘ಹೆಣ್ಣು ಎಂಬ ಪದ ಕೇಳಿದ ಕೂಡಲೇ   ನೆನಪಾಗುವುದು ಸೀತೆ ಹಾಗೂ ದ್ರೌಪದಿ. ಕೃಷ್ಣ, ಭೀಮ ಹಾಗೂ ಅರ್ಜುನನ ನೆರವಿನಿಂದ ದ್ರೌಪದಿ ತನ್ನ ಸಂಕಲ್ಪ ಈಡೇರಿಸಿಕೊಂಡಳು. ಸೀತೆಯದು ದೃಢ­ಸಂಕಲ್ಪದ ನಿಲುವು. ಎಂತಹ ಸನ್ನಿವೇಶ ಬಂದರೂ ನಿಲುವು ಬದಲು ಮಾಡಿಕೊಳ್ಳ­ಲಿಲ್ಲ. ವಿಚಲಿತಳಾಗಲಿಲ್ಲ’ ಎಂದರು.‘ಹೆಣ್ಣುಮಕ್ಕಳು ಇಂದು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಆರ್ಥಿಕ ಸ್ಥಿತಿಯೂ ಸುಧಾರಣೆ ಆಗಿದೆ. ಆದರೆ, ಶೋಷಣೆ ಕಡಿಮೆಯಾಗಿಲ್ಲ. ಪುರುಷರ ಮನೋಭಾವ ಬದಲಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ’ ಎಂದರು.ಹಿರಿಯ ನಟಿ ಬಿ.ಸರೋಜಾ ದೇವಿ ಕಾರ್ಯಕ್ರಮ ಉದ್ಘಾಟಿಸಿ, ‘ಹೆಣ್ಣು ಮಕ್ಕಳನ್ನು ಈ ಹಿಂದೆ ಕಡೆಗಣಿಸಲಾಗು­ತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಪ್ರೀತಿ, ತ್ಯಾಗದ ಸಂಕೇತ. ಹೆಣ್ಣು ಯಾವುದೇ ಸ್ಥಾನಕ್ಕೆ ಹೋದರೂ ತನ್ನ ಕರ್ತವ್ಯ ಮರೆಯಬಾರದು. ಅಹಂ ಬೆಳೆಸಿಕೊಳ್ಳಬಾರದು’ ಎಂದು ಕಿವಿ­ಮಾತು ಹೇಳಿದರು.ಜಲಮಂಡಳಿಯ ಮುಖ್ಯ ಆಡಳಿತಾ­ಧಿಕಾರಿ ಕಾಶೀನಾಥ್‌ ಪವಾರ್‌, ಮುಖ್ಯ ಎಂಜಿನಿಯರ್‌  ಎಸ್‌.ಎಂ.ಬಸವ­ರಾಜು, ಸಂಘದ ಅಧ್ಯಕ್ಷ ರುದ್ರೇಗೌಡ, ಮಹಿಳಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಬಿ.ಎಸ್‌.ಜಯಲಕ್ಷ್ಮಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.