ಮಂಗಳವಾರ, ಜೂನ್ 22, 2021
29 °C

ಮಹಿಳೆ ಅಭಿವೃದ್ಧಿಗೆ ಹಲವು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಮಹಿಳೆಯರು ಸಮಾಜದಲ್ಲಿನ  ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಮಹಿಳಾ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಪೂರಕವಾಗಿ ನಡೆದುಕೊಳ್ಳುತ್ತಿವೆ ಎಂದು ಸಿಎಂಎಸ್‌ಎಸ್‌ಎಸ್ ಅಧ್ಯಕ್ಷೆ ಡಯಾನ ಹೇಳಿದರು. ತಾಲ್ಲೂಕಿನ ಸಂತವೇರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಸಹಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳು ಕೇವಲ ಹಣ ಉಳಿತಾಯ  ಮಾಡುವ ಸಲುವಾಗಿ ಮಾತ್ರ ಇರದೆ ಏನನ್ನಾದರು ಸಾಧನೆ ಮಾಡುವುದಕ್ಕಾಗಿ ಹಣವನ್ನು ಬಳಸಿಕೊಳ್ಳುವಂತೆ ಮಹಿಳೆಯರಿಗೆ ಕರೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ದೇವರಾಜ್ ಮಾತನಾಡಿ ಇತ್ತೀಚೆಗೆ ಮಹಿಳೆಯರು ಸಕ್ರೀಯರಾಗಿ ಸಮಾಜದಲ್ಲಿ ಮುಂದುವರೆಯುತ್ತಿರುವುದು ಸ್ವಾಗತಾರ್ಹವಾಗಿದ್ದು, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಚರ್ಚ್ ಬಿಶಪ್ ಕಾರ್ಡೊಜಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೀರಭದ್ರಪ್ಪ, ಮಹಿಳಾ ಸಂಘಟನೆಯ ರೋಸಿ, ವಿಮಲ, ಅಪ್ಪು, ಪಾಯಸ್ ಮತ್ತು ಮಂಜುಳಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.