ಸೋಮವಾರ, ಜನವರಿ 20, 2020
18 °C

ಮಾಂಸಾಹಾರ: ಯುವತಿಗೆ ಕುತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್):  ಕಳೆದ 15 ವರ್ಷಗಳಿಂದ ಬೇರೆ ಯಾವುದೇ ಆಹಾರ ಸೇವಿಸದೇ ಕೋಳಿ ಮಾಂಸ ಸೇವಿಸಿದ ಇಂಗ್ಲೆಂಡ್‌ನ 17 ವರ್ಷದ ಯುವತಿಯೊಬ್ಬಳು ಅಶಕ್ತಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬರ್ಮಿಂಗ್‌ಹ್ಯಾಮ್‌ನ ಸ್ಟೆಸೆ ಇರ‌್ವಿನ್ ಎಂಬಾಕೆ  ಎರಡನೇ ವರ್ಷದಿಂದ ಸತತ 15 ವರ್ಷಗಳವರೆಗೂ ಕೇವಲ ಕೋಳಿ ಮಾಂಸ ಸೇವಿಸಿ ಈಗ ಹಾಸಿಗೆ ಹಿಡಿದಿದ್ದಾಳೆ ಎಂದು `ಸನ್~ ವರದಿ ಮಾಡಿದೆ.ಒಂದು ಬಾರಿಯೂ ಆಕೆ ತರಕಾರಿ ಅಥವಾ ಹಣ್ಣುಗಳನ್ನು ಸೇವಿಸಿಲ್ಲ. ಇದರಿಂದ ರಕ್ತಹೀನತೆಯಿಂದ ಬಳಲುತ್ತಿದ್ದು, ಗಂಟಲಿನ ರಕ್ತನಾಳಗಳಲ್ಲಿ ಊತ ಕಂಡು ಬಂದಿದೆ. ಈಗ ಅವಳಿಗೆ ವಿಟಮಿನ್‌ಗಳ ತುರ್ತು ಅಗತ್ಯವಿದೆ ಎಂದಿದ್ದಾರೆ ವೈದ್ಯರು.

ಪ್ರತಿಕ್ರಿಯಿಸಿ (+)