ಗುರುವಾರ , ಮೇ 13, 2021
34 °C

ಮಾಂಸ ಮಾರಾಟ ನಿಷೇಧ ಕೈಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಸರ್ಕಾರ ಮಾಂಸ ಮಾರಾಟ ನಿಷೇಧವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು~ ಎಂದು ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ ಸರ್ಕಾರವನ್ನು ಆಗ್ರಹ ಪಡಿಸಿದರು.ಸೋಮವಾರ ನಗರದಲ್ಲಿ ನ್ಯಾಯಕ್ಕಾಗಿ ನಾವು ಸಂಘಟನೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಸರ್ಕಾರವು ಸರ್ವೋದಯ ದಿನ, ಮಹಾಶಿವರಾತ್ರಿ, ಶ್ರೀರಾಮ ನವಮಿ, ಮಹಾವೀರ ಜಯಂತಿ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಬುದ್ದ ಪೂರ್ಣಿಮಾ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಗಾಂಧಿ ಜಯಂತಿ ದಿನಗಳಂದು ಮಾಂಸ ಮಾರಾಟವನ್ನು ನಿಷೇಧಿಸಿದೆ. ಇದು ಬಹುಸಂಖ್ಯಾತರು  ಅಲ್ಪಸಂಖ್ಯಾತರ ಮೇಲೆ ಆಡಳಿತವನ್ನು ನಡೆಸುತ್ತಿರುವ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ~ ಎಂದರು.ನ್ಯಾಯಕ್ಕಾಗಿ ನಾವು ಸಂಘಟನೆ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್ ಮಾತನಾಡಿ, `ಹಿಂದೂ ಧರ್ಮದಲ್ಲಿ ಮಾಂಸವನ್ನು ಸೇವಿಸುವವರ ಪ್ರಮಾಣ ಅಧಿಕವಾಗಿದ್ದು, ಮಾಂಸಹಾರಿಗಳ ಮೇಲೆ ದಾಳಿ ಮಾಡಲು ಹೋರಟಿದೆ. ನಿಷೇಧದಿಂದ ಮಾಂಸ ಮಾರಾಟಗಾರರ ಬದುಕು ಅಂತಂತ್ರರಾಗುವರಿಂದಾಗಿ ಸರ್ಕಾರ ನಿಷೇಧವನ್ನು ಬಿಡಬೇಕು~ ಎಂದು ಹೇಳಿದರು.. ಸರ್ಕಾರವನ್ನು ಎಚ್ಚರಿಸಲು ಅಂಬೇಡ್ಕರ್ ದಿನಾಚರಣೆಯಂದು ಮಾಂಸವನ್ನು ಸೇವಿಸಿ ಹೋರಾಟವನ್ನು ಆರಂಭಿಸುತ್ತೇವೆ ಎಂದು  ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರುನಾಡ ಸೇನೆ ರಾಜ್ಯ ಅಧ್ಯಕ್ಷ ಪಟಾಪಟ್ ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.