ರಾಂಚಿ (ಪಿಟಿಐ): ಒಲಿಂಪಿಯನ್ ಹಾಗೂ 1978ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಕೇರಳದ ಮಾಜಿ ಅಥ್ಲೀಟ್ ಹಾಗೂ ತಂಡದ ಚೆಫ್ ಡಿ ಮಿಷನ್ ಆಗಿದ್ದ ಸುರೇಶ್ ಬಾಬು (58) ಅವರು ಶನಿವಾರ ಇಲ್ಲಿ ನಿಧನರಾದರು.

ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವ ಇಲ್ಲಿನ ಖೇಲ್ ಗೌನ್ ಅಥ್ಲೆಟಿಕ್ ಗ್ರಾಮದ ಬಳಿಯಿರುವ ಮೆಗಾ ಕ್ರೀಡಾ ಸಂಕಿರ್ಣದ ಬಳಿ ಸುರೇಶ್ ಬಾಬು ರಕ್ತದ ವಾಂತಿ ಮಾಡಿಕೊಂಡರು.ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.ಆಸ್ಟತ್ರೆಯಲ್ಲಿ ಸುರೇಶ್ ಬಾಬು ಬೆಳಿಗ್ಗೆ 11.30ರ ಸುಮಾರಿಗೆ ಮೃತಪಟ್ಟರು ಎಂದು ಕೇರಳ ಒಲಿಂಪಿಕ್ ಸಂಸ್ಥೆಯ ಅಧಿಕಾರಿ ಕೆ.ಎಸ್. ಬಾಬು ಸ್ಪಷ್ಟಪಡಿಸಿದರು. ಅವರು ರಕ್ತದೊತ್ತಡದಿಂದ ಹಾಗೂ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು.

ಸುರೇಶ್ ಬಾಬು ಅವರು ಪತ್ನಿ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.ಅವರು 1979ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು. 1972ರ ಒಲಿಂಪಿಕ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1978ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸೇರಿದಂತೆ ಇತರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.