ಮಾಜಿ ಸಚಿವರಿಂದ ರೈತರಿಗೆ ಧನ ಸಹಾಯ

7

ಮಾಜಿ ಸಚಿವರಿಂದ ರೈತರಿಗೆ ಧನ ಸಹಾಯ

Published:
Updated:

ಹೊಸದುರ್ಗ: ತಾಲ್ಲೂಕಿನ ಚಿಕ್ಕತೇಕಲವಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ಬಣವೆ ಕಳೆದುಕೊಂಡ ಮೂರು ಮಂದಿ  ರೈತರಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್  ವೈಯಕ್ತಿಕವಾಗಿ ಒಟ್ಟು ` 90 ಸಾವಿರ ಪರಿಹಾರ ಧನ ನೀಡಿದರು.ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ತೆನೆ ಸಹಿತ ಒಟ್ಟಲಾದ ಬಣವೆಗೆ ಬೆಂಕಿ ಬಿದ್ದು ರೈತರು ಅಪಾರ ನಷ್ಟಕ್ಕೊಳಗಾಗಿದ್ದರು. ವಿಷಯ ತಿಳಿದ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್  ಬೆಂಕಿ ಆಕಸ್ಮಿಕದಲ್ಲಿ ನಷ್ಟಕ್ಕೊಳಗಾದ ರೈತ ಕರಿಯಪ್ಪ ಅವರಿಗೆ `52 ಸಾವಿರ  ನರಸಿಂಹಪ್ಪ ಅವರಿಗೆ ` 26 ಸಾವಿರ ಹಾಗೂ ದೇವರಾಜು ಎಂಬುವರಿಗೆ ` 12 ಸಾವಿರರೂ ನಗದು ಹಣವನ್ನು ವೈಯಕ್ತಿಕವಾಗಿ ನೀಡಿ ಸಾಂತ್ವನ ಹೇಳಿದರು.ಇದೇ ಸಂದರ್ಭದಲ್ಲಿ ಗ್ರಾಮದ ಅಂಗವಿಕಲ ರಾಮಣ್ಣ ಅವರಿಗೆ  ಸ್ವಂತ ಉದ್ಯೋಗ ಕೈಗೊಳ್ಳಲು ಗೂಳಿಹಟ್ಟಿ ಶೇಖರ್ ಅಭಿಮಾನಿ ಬಳಗದ ವತಿಯಿಂದ ` 10 ಸಾವಿರ  ಹಣಕಾಸು ನೆರವು ನೀಡಲಾಯಿತು.ಮಾಡದಕರೆ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸಂಭವಿಸಿದ  ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡು ನತದೃಷ್ಟ ಗೋವಿಂದಪ್ಪ ಎಂಬುವರಿಗೆ  ಪುನರ್ವಸತಿಗಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ` 50 ಸಾವಿರ ನಗದು ನೆರವು ನೀಡಿದರು.ವಕೀಲ ಸುರೇಶ್, ತಿಮ್ಮಪ್ಪ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry