ಇತ್ತೀಚೆಗೆ ಒಂದು ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿಯವರು ನನ್ನನ್ನು ಜೀವಂತವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ, ಮಾಟಮಂತ್ರಗಳ ಪ್ರಯೋಗ ನಡೆದಿದೆ’ ಎಂಬ ಹೇಳಿಕೆ ಕೊಟ್ಟಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಮಾಟ- ಮಂತ್ರಗಳನ್ನು ನಂಬುತ್ತಾರೆಂದರೆ ಇಂಥ ಮುಖ್ಯಮಂತ್ರಿಯ ತಿಳುವಳಿಕೆಯ ಮಟ್ಟವನ್ನು ಪ್ರಶ್ನಿಸುವಂತಾಗಿರುವುದು ದುರದೃಷ್ಟಕರ. All God believers are barberians ಎನ್ನುವ Robert Ingersoll ನ ಮಾತನ್ನು ಅವರಿಗೆ ನೆನಪಿಸಿಕೊಡುತ್ತೇನೆ. ಈ ಜಗತ್ತಿನಲ್ಲಿ ದೇವರೂ ಇಲ್ಲ, ದೆವ್ವವೂ ಇಲ್ಲ, ಎಂಬ ಸತ್ಯವನ್ನು ಇವರು ಅರಿಯಲಿ. ಎಷ್ಟಾದರೂ ಇವರು ರಾಜಕಾರಣಿಯಲ್ಲವೇ? ಈ ಹೇಳಿಕೆಯ ಹಿಂದೆ ರಾಜಕೀಯ ಇದೆ.

ಮಾಟ- ಮಂತ್ರದಿಂದ ಒಬ್ಬ ವ್ಯಕ್ತಿಯ ಜೀವ ಹರಣ ಮಾಡುವುದಾಗಿದ್ದರೆ ಈ ದೇಶದಲ್ಲಿ ಹಲವಾರು ಮಂತ್ರವಾದಿಗಳಿದ್ದಾರೆ. ಅವರೆಲ್ಲ ಈ ದೇಶದ ಸಮಸ್ಯೆಗಳನ್ನು ಮಾಟ- ಮಂತ್ರದಿಂದ ಪರಿಹರಿಸಬಹುದಾಗಿತ್ತು. ವಾಸ್ತವ ಹೀಗಿರುವಾಗ ಈ ಮುಖ್ಯಮಂತ್ರಿಗಳಿಗೇಕೆ ಈ ಮಾಟ- ಮಂತ್ರದ ಅಜ್ಞಾನ ಆವರಿಸಿದೆಯೋ ತಿಳಿಯದು.

ಮಾಟ- ಮಂತ್ರಗಳನ್ನು ನಂಬುವ ಈ ದೇಶದ ಅಸಂಖ್ಯ ಮುಗ್ಧ ಜನರನ್ನು ವಂಚಿಸುವ ಹುನ್ನಾರವಿದೆಯೇ ಹೊರತು, ಮತ್ತೇನಲ್ಲ. ಇಂಥ ಹೇಳಿಕೆ ಕೊಡುವುದು ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಇಂಥ ಹುಚ್ಚಾಟವನ್ನು ಬಿಟ್ಟು, ತಾವು ಈ ಸ್ಥಾನಕ್ಕೆ ಬರಲು ಜನರು ಮತ್ತು ಕಾರ್ಯಕರ್ತರು ಕಾರಣ ಎನ್ನುವ ಸತ್ಯವನ್ನು ಅರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.