ಕಾರವಾರ: ಅಲೋಪತಿ ಔಷಧಿಯ ಭರಾಟೆಯ ನಡುವೆ, ಪ್ರತಿಷ್ಠಿತ ಆಸ್ಪತ್ರೆಗಳನ್ನೂ ಮೀರಿಸುವಂತೆ, ಇಲ್ಲೊಂದು ಆಸ್ಪತ್ರೆ ಸದ್ದಿಲ್ಲದೇ ಆರೋಗ್ಯ ಸೇವೆ ಒದಗಿಸುತ್ತಿದೆ.ಬಡರೋಗಿಗಳ ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಕಾರವಾರದ ಜಿಲ್ಲಾ ಆಯುರ್ವೇದ ಆಸ್ಪತ್ರೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಸಂಖ್ಯಾತ ರೋಗಿಗಳಿಗೆ ಆಧಾರವಾಗಿ ಅನೇಕ ಸುದೀರ್ಘ ಹಾಗೂ ಗಂಭೀರ ಕಾಯಿಲೆಗಳನ್ನು ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೇ ಗುಣಪಡಿಸಿದ ಉದಾಹರಣೆಗಳು ಆಸ್ಪತ್ರೆಯಲ್ಲಿ ಸಾಕಷ್ಟಿವೆ. ಇತ್ತೀಚಿಗಂತೂ ಬೆಂಗಳೂರಿನ ಪ್ರತಿಷ್ಠಿತ ಅಲೋಪತಿ ಆಸ್ಪತ್ರೆಯಲ್ಲಿ ಗುಣಪಡಿಸಲಾಗದ, ವೈದ್ಯಕೀಯ ಕ್ಷೇತ್ರಕ್ಕೂ ಸವಾಲೆಸೆದಂಥ ನರವಿಕಾರ ರೋಗಕ್ಕೂ ಚಿಕಿತ್ಸೆ ನೀಡಿದ್ದು ಅದು ಫಲಪ್ರದವಾಗಿದೆ.

ಸಂಧಿವಾತ, ನರರೋಗ, ಪಾರ್ಶ್ವವಾಯು, ರೋಗಗಳನ್ನು ಕಾರವಾರ ಆಯುರ್ವೇದ ಆಸ್ಪತ್ರೆಯಲ್ಲಿ ಗುಣಪಡಿಸಲಾಗಿದೆ. ಜಿಲ್ಲೆಯ ಅನೇಕರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಹಣ ಸುರಿದರೂ ಕಡಿಮೆ ಆಗದ ರೋಗಳಿಗೆ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೂರಾರು ಜನರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

ಇಂಥದೊಂದು ಮಾದರಿ ಆಯುರ್ವೇದ ಆಸ್ಪತ್ರೆಗೆ ಡಾ. ಜಗದೀಶ ಯಾಜಿ, ಡಾ. ಭಾರತಿ ಹಾಗೂ ಡಾ. ಲಲಿತಾ ಶೆಟ್ಟಿ ಅವರ ಸೇವೆ ಕಾರಣವಾಗಿದೆ. ಕಳೆದ ಐದಾರು ವರ್ಷಗಳಿಂದ ಪ್ರಭಾರ ವೈದ್ಯಧಿಕಾರಿಯಾಗಿ ಕಾರವಾರ ಆಯುರ್ವೇದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಯಾಜಿ ಈಗ ಶಿರಸಿಗೆ ವರ್ಗಾವಣೆಗೊಂಡಿದ್ದಾರೆ.

ಕಾರವಾರ ಆಯುರ್ವೇದ ಆಸ್ಪತ್ರೆಯಲ್ಲಿ ನೀಡುವ ಪರಿಣಾಮಕಾರಿ ಚಿಕಿತ್ಸೆಯಿಂದಾಗಿ ಇಲ್ಲಿ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂರ್ನಾಲ್ಕು ಪಟ್ಟು ಹೆಚ್ಚಿದೆಯಲ್ಲದೇ ಕಾರವಾರ ಜಿಲ್ಲಾ ಆಯುರ್ವೇದ ಆಸ್ಪತ್ರೆಯು ಈ ದಿಶೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಹೆಚ್ಚಿನ ಸೌಲಭ್ಯಗಳಿಲ್ಲದಿದ್ದರೂ ಸಹ ಕಾರವಾರ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಯುಶಸ್ವಿಯಾಗಿ ಅಳವಡಿಸಲಾಗುತ್ತಿದೆ. ಹೀಗಾಗಿ ಡಾ. ಜಗದೀಶ ಯಾಜಿ ಅವರು ರಾಜ್ಯದ ವಿವಿದೆಡೆಗಳಲ್ಲಿ ಪಂಚಕರ್ಮ ಹಾಗೂ ಶಾಲಾಕ್ಯ ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯರುಗಳಿಗೆ ಅನುಭವ ಹಾಗೂ ಮಾಹಿತಿಯನ್ನು ಹಂಚುತ್ತಿದ್ದಾರೆ.

ಕಾರವಾರ, ಕುಮಟಾ ಹಾಗೂ ಶಿರಸಿ ಆಯುರ್ವೇದ ಆಸ್ಪತ್ರೆಗಳಲ್ಲಿ ಕಳೆದ ಒಂದು ವರ್ಷದಲ್ಲಿ 1,25,045 ರೋಗಿಗಳು ವಿವಿಧ ಚಿಕಿತ್ಸೆ ಪಡೆದಿದ್ದಾರೆ. ಕಾರವಾರ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ರೋಗಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. ಕಳೆದೆರಡು ವರ್ಷಗಳಲ್ಲಿ ವಿರೇಚನ ಸ್ನೇಹಪಾನ, ನಸ್ಯ ಕರ್ಮ ಹಾಗೂ ನಾಸಾಪನ, ಯೋಗಬಸ್ತಿ ಸೇರಿದಂತೆ ಮಾತ್ರ ಬಸ್ತಿ, ಪತ್ರ ಪೋಟಲಿ, ವಾಲೂಕಸ್ವೇದ, ಗ್ರೀವಾ ಬಸ್ತಿ, ಕಟಿ ಬಸ್ತಿ ಹಾಗೂ ಜಾನು ಬಸ್ತಿ ಚಿಕಿತ್ಸೆಗಳನ್ನು ಸೇರಿದಂತೆ ಸಾವಿರಾರು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ.

ಕಾರವಾರ ಆಸ್ಪತ್ರೆಯಲ್ಲಿ 2009ರಲ್ಲಿ 67865 ರೋಗಿಗಳು, 2010ರಲ್ಲಿ 74744 ರೋಗಿಗಳು ವಿವಿಧ ಚಿಕಿತ್ಸೆಗಳನ್ನು ಪಡೆದಿದ್ದಾರೆ. ಕಾರವಾರ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಜಗದೀಶ ಯಾಜಿ, ಡಾ. ಲಲಿತಾ ಶೆಟ್ಟಿ ಹಾಗೂ ಡಾ. ಭಾರತಿ ಅವರು ನೀಡುತ್ತಿರುವ ಪರಿಣಾಮಕಾರಿ ಚಿಕಿತ್ಸೆಯಿಂದಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯರ ಪ್ರಾಮಾಣಿಕ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

‘ಜಿಲ್ಲೆಯಾದ್ಯಂತ ಆಯುರ್ವೇದವನ್ನು ಜನಪ್ರಿಯಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಪರಂಪರಾಗತ ವೈದ್ಯರ ಕಾರ್ಯಗಾರಗಳನ್ನು ತರಬೇತಿಗಳನ್ನು ಚಿಕಿತ್ಸಾ ಶಿಬಿರಗಳನ್ನು ಎಲ್ಲ ಚಿಕಿತ್ಸಾಲಯಗಳಲ್ಲಿ ಪ್ರತಿ ಒಂದನೇ ಹಾಗೂ ಮೂರನೇ ಶನಿವಾರ ಹಮ್ಮಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ. ರಾಮಚಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.