ಶನಿವಾರ, ಮೇ 8, 2021
26 °C

ಮಾದಿಗರ ಜನಾಂಗ ಮುನ್ನಡೆಸುವ ಮುಖಂಡರು ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: `ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಮಾದಿಗ ಸಂಘಟನೆ ಅಸ್ತಿತ್ವದಲ್ಲಿದ್ದ ಬಗ್ಗೆ ಕರ್ನಾಟಕ ಗೆಜೆಟ್‌ನಲ್ಲಿ ಉಲ್ಲೇಖ ಇದೆ. ಆದರೆ ದಶಕಗಳ ಇತಿಹಾಸ ಇರುವ ಈ ಸಂಘಟನೆಯನ್ನು ಮುನ್ನಡೆಸುವವರ ಸಂಖ್ಯೆ ಕಡಿಮೆ ಇತ್ತು ಎಂದು ದಲಿತ ಸಂಘಟನೆ ಮುಖಂಡ ವೀರಣ್ಣ ಹೇಳಿದರು.

ನಗರದ ಪುರಭವನದಲ್ಲಿ ಮಂಗಳವಾರ ನಡೆದ ಮಾದಿಗ ಜನಾಂಗದ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ತಾಲ್ಲೂಕಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಮಾದಿಗರಿಗೆ ದೊರೆಯಬೇಕಾಗಿದ್ದ ಮೀಸಲಾತಿ ಸೌಲಭ್ಯಗಳು ಇತರೆ ಜನಾಂಗಕ್ಕೆ ಹೋಗುತ್ತಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.ಎಂಆರ್‌ಎಚ್‌ಎಸ್ ರಾಜ್ಯ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ರಾಜಕೀಯ ಶಕ್ತಿಯಾಗಿ ಮಾದಿಗ ಜನಾಂಗ ರೂಪುಗೊಂಡಾಗ ಮಾತ್ರ ಸರ್ಕಾರಿ ಸೌಲಭ್ಯ ದೊರೆಯಲು ಸಾಧ್ಯ. ಇಂದು ಜಾತಿ ವರ್ಗೀಕರಣದ  ತುರ್ತು ಅಗತ್ಯವಿದೆ. ಇಲ್ಲವಾದರೆ ಹಿಂದುಳಿದ ಜನಾಂಗ ಎಂದು ಹೇಳುವ ಮೂಲಕ ಮಾದಿಗ ಜನಾಂಗಕ್ಕೆ ದೊರೆಯುವ ಸೌಲಭ್ಯಗಳು ದೊರೆಯದೆ ಕೈತಪ್ಪಿ ಹೋಗಲಿವೆ.ಈ ಬಗ್ಗೆ ಜನಾಂಗದ ಎಲ್ಲಾ ಮುಖಂಡರು ಪಕ್ಷ ಬೇಧ ಮರೆತು ಜನಾಂಗದ ಏಳಿಗೆಗೆ ಪ್ರಭಲವಾದ ಸಂಘನೆ ಅಗತ್ಯವಿದೆ ಎಂದು ಹೇಳಿದರು.ಆತ್ಮಾವಲೋಕನ ಸಭೆಯಲ್ಲಿ ಸಿದ್ದರಾಜು, ಮೈಲಾರಪ್ಪ ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು. ಸಭೆಯಲ್ಲಿ ದಲಿತ ವಿಮೋಚನಾ ಸೇನೆ ರಾಜ್ಯ ಅಧ್ಯಕ್ಷ ಮಾ.ಮುನಿರಾಜು, ತಾಲ್ಲೂಕು ಭೂ ಮಂಜೂರಾತಿ ಸಮಿತಿ ಸದಸ್ಯ ಆರ್.ರಾಮಲಿಂಗಯ್ಯ,ತಾಲ್ಲೂಕು ಕಾಂಗ್ರೆಸ್ ಎಸ್.ಸಿ,ಎಸ್.ಟಿ ಅಧ್ಯಕ್ಷ ಸಿ.ಜಿ.ನಾಗೇಶ್, ಸಹಕಾರಿ ಇಲಾಖೆ ಹಿರಿಯ ಲೆಕ್ಕಾಧಿಕಾರಿ ಎಂ.ಮುನಿಯಪ್ಪ, ಸಮಾತ ಸೈನಿಕ ದಳದ ಮುನಿಸುಬ್ಬಯ್ಯ, ತಾ.ಪಂ.ಸದಸ್ಯ ಕೆ.ಯಲ್ಲಪ್ಪ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಪುರುಷೋತ್ತಮ್, ಮಾಜಿ ಗ್ರಾ.ಪಂ.ಅಧ್ಯಕ್ಷ ವಿ.ವೆಂಕಟೇಶ್, ದರ್ಗಾಜೋಗಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ನಾಗರತ್ನಮ್ಮ, ಮಾಜಿ ನಗರ ಪುರಸಭೆ ಸದಸ್ಯ ವೈ.ನಾರಾಯಣಪ್ಪ,ಜನಪರ ವೇದಿಕೆ ರಾಜ್ಯ ಅಧ್ಯಕ್ಷ ನಂಜುಂಡಯ್ಯ, ಮಂಜುನಾಥ್, ದಲಿತ ಯುವ ಮುಖಂಡರಾದ ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ತಾ.ಅಧ್ಯಕ್ಷ ಅಂಜನಮೂರ್ತಿ, ಕೃಷ್ಣಮೂರ್ತಿ, ಪೂಜಪ್ಪ,  ಸದಾನಂದ, ಪಿ.ಮೂರ್ತಿ, ಆರ್.ಶಿವಣ್ಣ, ರಾಮಾಂಜಿನಪ್ಪ, ಚಂದ್ರಣ್ಣ, ಅಪ್ಪಕಾರನಹಳ್ಳು ಹನುಮಯ್ಯ, ಟೆಲಿಪೋನ್ ನರಸಿಂಹಮೂರ್ತಿ ಮುಂತಾದವರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.