ಬೆಂಗಳೂರು: ‘ಲೇಖಕ ಅಗ್ನಿ ಶ್ರೀಧರ್ ರಚಿಸಿರುವ ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಕೃತಿ ಅಖಂಡ ಮಾನವನ ಹುಡುಕಾಟದ ಬರಹಗಳಾಗಿವೆ’ ಎಂದು ಸಾಹಿತಿ ಮೊಗಳ್ಳಿ ಗಣೇಶ್ ಹೇಳಿದರು.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ವಾಡಿಯಾ ಸಭಾಂಗಣದಲ್ಲಿ ಇತ್ತೀಚೆಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.

‘ಅತ್ಯಂತ ಸರಳ ಭಾಷೆಯಲ್ಲಿ ರಚಿಸಲಾಗಿರುವ ಈ ಕೃತಿಯು ಓದುಗರನ್ನು ತನ್ನಲ್ಲಿ ಸೆಳೆದುಕೊಳ್ಳುವ ಶಕ್ತಿ ಹೊಂದಿದೆ. ಮಾಂತ್ರಿಕರ ಬದುಕನ್ನು ಕುತೂಹಲಕಾರಿಯಾಗಿ, ಪತ್ತೇದಾರಿಯಾಗಿ ಬರೆದುಕೊಂಡು ಹೋಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ‘ದಾದಾಗಿರಿಯ ದಿನಗಳು’ ಕೃತಿಯ ಮೂರನೇ ಮುದ್ರಣ, ‘ಎದೆಗಾರಿಕೆ’ ಕೃತಿಯ ಎರಡನೇ ಮುದ್ರಣವನ್ನು ಸಹ ಬಿಡುಗಡೆಗೊಳಿಸಲಾಯಿತು.ಎರಡೂ ಕೃತಿಗಳನ್ನು ಕುರಿತು ಮಾತನಾಡಿದ ಡಾ.ಬಂಜಗೆರೆ ಜಯಪ್ರಕಾಶ್ ಸಾಹಿತಿ ಡಾ.ವಿಜಯಾ, ಅಗ್ನಿ ಶ್ರೀಧರ್ ಮಾತನಾಡಿದರು. ಸಾಹಿತಿ ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.