ಗಾಂಧೀಜಿ ಅವರ ನಿಕಟವರ್ತಿಗಳಲ್ಲಿ ಅಬ್ದುಲ್ ಗಫಾರ್ ಖಾನ್ (1890–1988) ಒಬ್ಬರು. ಗಾಂಧಿ ಪ್ರತಿಪಾದಿಸಿದ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು ಆ ತತ್ವವನ್ನೇ ತಮ್ಮ ಬದುಕಿನ ತಳಹದಿಯನ್ನಾಗಿಸಿಕೊಂಡವರು. ‘ಗಡಿನಾಡ ಗಾಂಧಿ’ ಎನ್ನುವುದು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷಣ.

ಭಾರತ–ಪಾಕಿಸ್ತಾನದ ವಿಭಜನೆಯನ್ನು ವಿರೋಧಿಸಿದ್ದ ಅವರು, ಎರಡೂ ದೇಶಗಳ ನಡುವೆ ಮಾನವೀಯತೆಯ ರಾಯಭಾರಿಯಂತೆ ಕೆಲಸ ಮಾಡಿದವರು. ಇಂಥ ಗಫಾರಜ್ಜ 1969ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ ಅವರಿಗೆ ಆತ್ಮೀಯ ಸ್ವಾಗತ ದೊರಕಿತ್ತು.

ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರೊಂದಿಗೆ ಗಫಾರ್ ಖಾನ್ ತೆರೆದ ಕಾರಿನಲ್ಲಿ ನಗರದಲ್ಲಿ ಸಂಚರಿಸಿದ್ದರು. ತಮ್ಮ ಬೆಂಗಳೂರು ಭೇಟಿಯ ನೆನಪಿಗಾಗಿ ಅವರು ಲಾಲ್‌ಬಾಗ್‌ನಲ್ಲಿ ಸಸಿಯೊಂದನ್ನು ನೆಡುತ್ತಿರುವ ಈ ಛಾಯಾಚಿತ್ರ, ಎಲ್ಲ ಕಾಲಕ್ಕೂ ಅಗತ್ಯವಾದ ಮನುಷ್ಯತ್ವದ ಚಿಗುರನ್ನೇ ನೆಡುತ್ತಿರುವಂತೆ ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.