ಬುಧವಾರ, ಜೂನ್ 3, 2020
27 °C

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

ಬಾಗಲಕೋಟೆ: ಪ್ರತಿಯೊಬ್ಬರು ಮಾನವೀಯ ಮೌಲ್ಯ ಅಳವಡಿಸಿಕೊಂಡು ವಿಶ್ವದಲ್ಲಿ ಶಾಂತಿ ನೆಲಸಲು ಅನುವು ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ವಿದ್ಯಾಗಿರಿಯ ಗೌರಿಶಂಕರ ಮಂಗಳ ಕಾರ್ಯಾಲಯದಲ್ಲಿ ಸೋಮವಾರ ಪ್ರಜಾಪಿತ  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಮತ್ತು ವರದಾನಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಜಗತ್ತಿನಲ್ಲಿ ಯಾರೊಬ್ಬರೂ ಶಾಶ್ವರವಲ್ಲ. ಆದ್ದರಿಂದ ಆತ್ಮಾವಲೋಕನ ಮಾಡಿಕೊಂಡು ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಹೇಳಿದರು. ಮೌಂಟ್ ಅಬುನಿಂದ ಆಗಮಿಸಿದ್ದ ರಾಜ ಯೋಗಿ ಮೃತ್ಯುಂಜಯ ಬಾಯಿಜಿ ಮಾತನಾಡಿ, ಭಯೋತ್ಪಾದನೆಯಿಂದ ಮಾನುಷ್ಯನ ಬದುಕು ಅಸಹನೀಯವಾಗಿದೆ ಎಂದರು.ಸಮಾಜದಲ್ಲಿ ಅಪರಾಧ ವೃದ್ಧಿಯಾಗಿತ್ತದೆ ಅಲ್ಲದೇ ಅನಾರೋಗ್ಯವೂ ಹೆಚ್ಚುತ್ತಿದೆ. ಪರಿಸರ ಮಾಲಿನ್ಯವಾಗುತ್ತಿದೆ ಎಂದ ಅವರು, ಸ್ವಾಸ್ಥ್ಯ ಸಮಾಜ ನಿರ್ಮಾಣ ಇಂದಿನ ಅಗತ್ಯ ಎಂದರು.ವಿಶ್ವದ 136 ರಾಷ್ಟ್ರಗಳಲ್ಲಿ ಪ್ರಜಾಪಿತಾ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಲ್ಲಿ ಜ್ಞಾನ, ಯೋಗ, ಸೇವೆ ಮತ್ತು ಶಾಂತಿ ನೆಲೆಸಲು ಶ್ರಮಿಸಲಾಗುತ್ತಿದೆ. ಬ್ರಹ್ಮ ಕುಮಾರ ಮತ್ತು ಕುಮಾರಿಯರಿಗೆ ಯಾವುದೇ ಜಾತಿ, ಧರ್ಮವಿಲ್ಲ ಕೇವಲ ಮನುಷ್ಯ ಜಾತಿ ಮಾತ್ರ ಎಂದರು.ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಟೀಕನಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ ಗಾವಿ ಈಶ್ವರೀಯ ಸೇವಾಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನ ಅಂಬಿಕಾಜಿ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಪದ್ಮಾಜಿ, ವಾಸಿಂಗ್‌ಟನ್ ಡಿ.ಸಿ.ಯ ಜನ್ನಾ, ಆಸ್ಟ್ರೇಲಿಯಾದ ಪ್ರಾಂಕ್ ಹಬರ್ಡ್ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.