ಮಾನ್ವಿ: ಕೇಂದ್ರ ಸರ್ಕಾರದ ಉದ್ದೇಶಿತ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ-2011 ಮತ್ತಿತರ ಹೊಸ ಮಸೂದೆಗಳನ್ನು ವಿರೋಧಿಸಿ ಸ್ಥಳೀಯ ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುವ ಮೂಲಕ ಪ್ರತಿಭಟನೆ ನಡೆಸಿದರು.

ನಂತರ ತಹಸೀಲ್ದಾರ್ ಕಚೇರಿಗೆ ತೆರಳಿದ ವಕೀಲರು ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಎಮ್.ಗಂಗಪ್ಪ ಕಲ್ಲೂರು ಅವರಿಗೆ ಸಲ್ಲಿಸಿದರು. ರಾಜ್ಯಸಭೆಯಲ್ಲಿ ಅಂಗೀಕರವಾದ ಉನ್ನತ ಶಿಕ್ಷಣ ಮಸೂದೆ-2011, ಹೊರದೇಶದ ಶಿಕ್ಷಣ ಸಂಸ್ಥೆಗಳ ಮಸೂದೆ-2010, ಶೈಕ್ಷಣಿಕ ಮಂಡಳಿಯ ಮಸೂದೆ-2010, ರಾಷ್ಟ್ರೀಯ ಕಾನೂನು ಶಾಲಾ ಮಸೂದೆ-2011, ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ-2012 ಮತ್ತಿತರ ಮಸೂದೆಗಳನ್ನು ಕೇಂದ್ರ ಸರ್ಕಾೃ ಜಾರಿಗೊಳಿಸಬಾರದು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಚೆನ್ನನಗೌಡ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ನಾಯಕ, ವಕೀಲರಾದ ಮಹಿಮೂದ ಅಲಿ, ಬಿ.ಕೆ.ಅಮರೇಶಪ್ಪ, ಶೇಖರಪ್ಪ ಪಾಟೀಲ್, ಗುಮ್ಮಾ ಬಸವರಾಜ, ಎ.ಬಿ,ಉಪ್ಪಳಮಠ, ಸೈಯದ್ ತನ್ವೀರುಲ್ ಹಸನ್, ವೀರನಗೌಡ ಪೋತ್ನಾಳ, ಪಿ.ತಿಪ್ಪಣ್ಣ ಬಾಗಲವಾಡ, ಜಯಶ್ರೀ, ಬಿ.ವಿಶ್ವನಾಥ, ಎಮ್.ಡಿ.ಆಸೀಫ್ ಹುಸೇನ್, ಪಂಪಾಪತಿ ಬಾಗಲವಾಡ, ಉಮೇಶ ಕೆ, ಮನೋಹರ ವಿಶ್ವಕರ್ಮ, ಸಿದ್ದಲಿಂಗಪ್ಪ ಕೊಟ್ನೇಕಲ್, ಶರಣಬಸವ ಹರವಿ, ಶ್ಯಾಮಸುಂದರ ನಾಯಕ, ರವಿಕುಮಾರ ಪಾಟೀಲ್, ಸಮದಾನಿ ಸಿದ್ದಿಕಿ, ಮೌನೇಶ ರಾಠೋಡ, ದೂಮಣ್ಣ ನಾಯಕ, ಹನುಮಂತ ನಾಯಕ ನೀರಮಾನ್ವಿ, ಜಾಲಾಪುರ ವೆಂಕಟೇಶ ನಾಯಕ ಮತ್ತಿತರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.