ಬುಧವಾರ, ಜೂನ್ 23, 2021
28 °C

ಮಾರ್ಚ್ 3ರಿಂದ ಸಮರ್ಥನಂ ಕ್ರಿಕೆಟ್ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ಕಾರ್ಪೊರೇಟ್ ಕ್ರಿಕೆಟ್ ಕಪ್. ಈ ಪಂದ್ಯಾವಳಿಗೆ ಈಗಾಗಲೇ ನೋಂದಾಯಿಸಿಕೊಂಡಿರುವ ತಂಡಗಳ ಸಂಖ್ಯೆ 20. ಆಯೋಜಕರಿಗೆ ಇನ್ನೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ. ಇವರಲ್ಲಿ ಯಾರಿಗೂ ನೋಡುವ ಶಕ್ತಿ ಇಲ್ಲ. ಆದರೂ ಸಮರ್ಥರು. ಇವರನ್ನೆಲ್ಲ ಕ್ರೀಡಾ ಕಣಕ್ಕಿಳಿಸಿದ್ದು, `ಸಮರ್ಥನಂ~ ಸಂಸ್ಥೆ.

ಹೌದು, ಮಾರ್ಚ್ 3ರಿಂದ ಆರಂಭಗೊಂಡು ಪ್ರತಿ ವಾರಾಂತ್ಯದಲ್ಲಿ ನಡೆಯಲಿರುವ ಕಾರ್ಪೊರೇಟ್ ಕ್ರಿಕೆಟ್ ಕಪ್‌ನಲ್ಲಿ ಆಡುವವರು ಅಂಧರೇ. ಈ ಕಾರ್ಯಚಟುವಟಿಕೆಗೆ ಮೇಯರ್ ಶಾರದಮ್ಮ, ನಟಿ ರಾಗಿಣಿ ಅಧಿಕೃತ ಚಾಲನೆ ನೀಡಿದರು.

ಪಂದ್ಯಾವಳಿಯು ನಾಕ್‌ಓಟ್ ಆಧಾರಿತ 10 ಓವರ್‌ಗಳಿಂದ ಕೂಡಿದ್ದು ರನ್ನರ್ ಅಪ್ ಪ್ರಶಸ್ತಿಯೂ ನೀಡಲಾಗುವುದು. ಪಾಲ್ಗೊಂಡ ತಂಡಗಳಿಂದ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮನ್, ಬೌಲರ್ ಹಾಗೂ ಉತ್ತಮ ಕ್ಷೇತ್ರರಕ್ಷಕ ಬಹುಮಾನವನ್ನೂ ನೀಡಲಾಗುವುದು.

ಆಸ್ಟ್ರೇಲಿಯಾ, ಶ್ರಿಲಂಕಾ, ವೆಸ್ಟ್ ಇಂಡಿಸ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಗೆದ್ದ ತಂಡಕ್ಕೆ ರೂ.50,000ವನ್ನು ಪ್ರಶಸ್ತಿ ಮೊತ್ತವಾಗಿ ನೀಡಲಾಗುವುದು. ಪಂದ್ಯಗಳು ಮಾರ್ಚ್ 3ರಿಂದ ಮೈಕೋ ಆಡುಗೋಡಿ ಮೈದಾನ ಹಾಗೂ ಲೊಯೋಲಾ ಕಾಲೇಜುಗಳಲ್ಲಿ ನಡೆಯಲಿದೆ.

ಮಾಹಿತಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆ (9449864699).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.