‘ಜೈಲಿನಲ್ಲಿ ಮಾಲಿಯಾಗಿದ್ದ ಲಾಲೂ’ (ಪ್ರ.ವಾ., ಡಿ. 17). ಶಿಕ್ಷಕರಾಗಿ ನಿಯೋಜಿತರಾಗಿದ್ದ ಲಾಲೂ, ಮಾಲಿ ಕೆಲಸ ಕೊಡುವಂತೆ ಕೋರಿಕೊಂಡಿದ್ದರಂತೆ: ಆಶ್ಚರ್ಯ! ಶಿಕ್ಷಕನ ಕೆಲಸ ನಿರಾಕರಿಸಿ, ಮಾಲಿಯಾದದ್ದಕ್ಕೆ ಈ ಮೂರು ಭಾವನೆಗಳಲ್ಲೊಂದು ಕಾರಣವಿರಬೇಕು: (1) ಬೋಧನೆ ನಿರುಪಯುಕ್ತ.

(‘ಆರ್ಟ್ ಈಸ್ ಯೂಸ್ಲೆಸ್’ ಎಂದಹಾಗೆ, ‘ಟೀಚಿಂಗ್ ಈಸ್ ಯೂಸ್ಲೆಸ್’). (2) ಬೋಧನೆಯ ಕೆಲಸಕ್ಕೆ ನೈತಿಕ ಅರ್ಹತೆಯಿಲ್ಲ. (3) ಎಲ್ಲಕ್ಕಿಂತ ಮಿಗಿಲಾಗಿ, ಮಾಲಿಯಾದರೆ, ಗಿಡಗಳನ್ನೆ ಮೇವು ಮಾಡಿಕೊಂಡು ತಿಂದು ತಣಿಯಬಹುದು! ಸಾಮಾನ್ಯವಲ್ಲ, ಲಾಲೂ ತಲೆ! (ರಾಜಕೀಯ ಶಿಕ್ಷಣ, ಅರ್ಥಾತ್ ಭ್ರಷ್ಟಾಚಾರ ಶಿಕ್ಷಣ ಕೊಡುವಂತೆ ಹೇಳಿದ್ದರೆ, ಅವರು ಸಂತೋಷದಿಂದ ಒಪ್ಪುತ್ತಿದ್ದರೇನೊ?).
–ಸಿ.ಪಿ.ಕೆ., ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.