ಗುರುವಾರ , ಅಕ್ಟೋಬರ್ 1, 2020
22 °C

ಮಾವನ ಹಾದಿಯಲ್ಲಿ ಇಮ್ರಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾವನ ಹಾದಿಯಲ್ಲಿ ಇಮ್ರಾನ್

ಸಾಕಷ್ಟು ವಿಭಿನ್ನ ಪಾತ್ರಗಳಿಂದ ಹೆಸರು ಮಾಡಿರುವ ಅಮೀರ್ ಖಾನ್ ಅವರ ಹಾದಿಯಲ್ಲಿಯೇ ಸಾಗಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಇದೀಗ ಅವರು ಒಪ್ಪಿಕೊಂಡಿರುವ ಪಾತ್ರಗಳು ಈ ಮಾತಿಗೆ ಇಂಬು ಕೊಡುತ್ತಿವೆ.ವಿಶಾಲ್ ಭಾರದ್ವಾಜ್ ಅವರ `ಮಾತೃ ಕಿ ಬಿಜಲೀ ಕ ಮಂಡೋಲ~, ಮಿಲನ್ ಲುಥಾರಿಯಾ ಅವರ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ -2~ ಮತ್ತು ತಿಂಗ್‌ಮನ್ಷು ಧುಲಿಯಾ ಅವರ `ಟಾಕೀಸ್~ ಚಿತ್ರಗಳಲ್ಲಿ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಒಂದರಲ್ಲಿ ಟಪೋರಿ ಪಾತ್ರ ಇದ್ದರೆ ಮತ್ತೊಂದರಲ್ಲಿ ಲವರ್‌ಬಾಯ್ ಪಾತ್ರ ಅವರದಾಗಿದೆ. ತಮ್ಮ ಇಂಥ ಪಾತ್ರಗಳ ಆಯ್ಕೆಗೆ ತಮ್ಮ ಮಾವ ಅಮೀರ್ ಖಾನ್ ಅವರ ಹಾದಿಯೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ವಾರ್ಧಾ ಆಗಮನ

ಬಾಲಿವುಡ್‌ನಲ್ಲಿ ಮಿಂಚಲು ಮತ್ತೊಬ್ಬ ವಿದೇಶಿ ಚೆಲುವೆಯ ಆಗಮನವಾಗಿದೆ. ಅವರೇ ವಾರ್ಧಾ ಖಾನ್. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಹುಟ್ಟಿದ ಈ ಚೆಲುವೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ರೂಪದರ್ಶಿಯಾಗಿ ವೃತ್ತಿ ಬದುಕು ಆರಂಭಿಸಿದ ವಾರ್ಧಾಗೆ ಚಲನಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕು ಎಂಬಾಸೆ ಇತ್ತಂತೆ. ಅದು ಇಷ್ಟು ಬೇಗ ಈಡೇರುತ್ತಿರುವುದು ಅವರ ಅಚ್ಚರಿಗೆ ಕಾರಣವಾಗಿದೆ.ಅವರು ನಟಿಸುತ್ತಿರುವ ಚಿತ್ರದ ಹೆಸರು `ಮಾರ್ಕ್‌ಶೀಟ್~. ಚಿತ್ರವನ್ನು ರಾಕೇಶ್‌ರಂಜನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ವಾರ್ಧಾಗೆ ನಾಯಕನಾಗಿ ಇಮ್ರಾನ್ ಜಹೀದ್ ನಟಿಸುತ್ತಿದ್ದಾರೆ. `ಪ್ರಸ್ತುತ ಭಾರತ ಎದುರಿಸುತ್ತಿರುವ ಶೈಕ್ಷಣಿಕ ವ್ಯವಸ್ಥೆಯ ವೈಫಲ್ಯಗಳನ್ನು ಕುರಿತು ಚಿತ್ರವನ್ನು ರೂಪಿಸಲಾಗುತ್ತಿದೆ.ಅದಕ್ಕೆ ವಿದೇಶದಿಂದ ಭಾರತಕ್ಕೆ ಬರುವ ನಾಯಕಿಯ ಪಾತ್ರಕ್ಕೆ ವಾರ್ಧಾ ಸೂಕ್ತ ಎನಿಸಿದರು. ಅದಕ್ಕೆ ಅವರಿಗೆ ಅವಕಾಶ ನೀಡಿದ್ದೇವೆ~ ಎಂದು ನಿರ್ದೇಶಕರು ಹೇಳಿದ್ದಾರೆ.`ನನ್ನದು ಸೂಕ್ಷ್ಮ ಮನಸ್ಸಿನ ಹುಡುಗಿಯ ಪಾತ್ರ. ಅದಕ್ಕಾಗಿ ನಟನೆಯ ತರಬೇತಿ ಪಡೆಯುತ್ತಿದ್ದೇನೆ~ ಎಂದು ಹೇಳಿರುವ ವಾರ್ಧಾ ಬಾಲಿವುಡ್‌ನಲ್ಲಿಯೇ ಭವಿಷ್ಯದ ಕನಸು ಕಾಣುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.