ಬೇಕಾದ ಸುದ್ದಿಯನ್ನು ಒಮ್ಮೆ ಗೂಗಲಿಸಿ ನೋಡಿ. ಬೇಕೋ ಬೇಡವೋ ತನ್ನಲ್ಲಿರುವ ಎಲ್ಲಾ ಸುದ್ದಿಯನ್ನು ನೀಡಿ ಅದು ಕೈತೊಳೆದುಕೊಳ್ಳುತ್ತದೆ. ಅವುಗಳಲ್ಲಿ ತಮಗೆ ಬೇಕಾದ ಒಂದನ್ನು ಹುಡುಕಿ ಓದುವುದು ಹಾಗೂ ಅದೇ ಸುದ್ದಿ ಬೇರೆ ಪತ್ರಿಕೆಗಳಲ್ಲಿ ನೋಡಬೇಕೆಂದರೂ ಸಂಬಂಧಿಸಿದ ಸುದ್ದಿಗಳು ಸಿಗದೇ ಪರದಾಡಬೇಕು. ಇಂಥದ್ದೊಂದು ಸಮಸ್ಯೆಗೆ ಸ್ಮಾರ್ಟ್ ಬ್ರೌಸರ್ ಮೂಲಕ ಸರಳ ಮಾರ್ಗವನ್ನು ಬೆಂಗಳೂರು ಮೂಲದ ಐಟಿ ಪರಿಣಿತರು ಅಭಿವೃದ್ಧಿಪಡಿಸಿದ್ದಾರೆ.

‘ಪಗ್ಮಾರ್ಕ್ಸ್’ ಎಂಬ ಹೊಸ ಬ್ರೌಸರ್ ಓದುಗರ ಹಾದಿಯನ್ನು ಸುಲಭವಾಗಿಸಿದ ಆ್ಯಂಡ್ರಾಯ್ಡ್ ಆ್ಯಪ್. ಇದನ್ನು ಒಂದು ಉದಾಹರಣೆಯ ಮೂಲಕ ಸರಳೀಕರಿಸಬಹುದು. ಪಗ್ಮಾರ್ಕ್ಸ್ ಬ್ರೌಸರನ್ನು ಆ್ಯಂಡ್ರಾಯ್ಡ್ ಆ್ಯಪ್ಸ್ಟೋರ್ನಿಂದ ಡೌನ್ಲೋಡ್ ಮಾಡಿ ನಿಮ್ಮ ಸ್ಮಾರ್ಟ್ಫೋನ್ಗೆ ಅಳವಡಿಸಿಕೊಂಡ ನಂತರ ‘ಸಚಿನ್ ತೆಂಡೂಲ್ಕರ್’ ಎಂದು ಟೈಪಿಸಿ. ಸಚಿನ್ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ, ಹಲವು ಉಧ್ಯಮಗಳಲ್ಲಿ ತೊಡಗಿಸಿಕೊಂಡವರು. ಈ ಎಲ್ಲದಕ್ಕೂ ಸಂಬಂಧಿಸಿದ ಸುದ್ದಿಗಳು ಪರದೆಯ ಮೇಲೆ ಸಿಗುತ್ತವೆ. ಅವುಗಳಲ್ಲಿ ನಿಮ್ಮ ಆಯ್ಕೆಯ ಸುದ್ದಿಯನ್ನು ಕ್ಲಿಕ್ಕಿಸಿ. ನಂತರ ಈ ಆ್ಯಪ್ ಓದುಗರ ಅಭಿರುಚಿಯನ್ನು ಕ್ಷಣಮಾತ್ರದಲ್ಲಿ ಗ್ರಹಿಸುತ್ತದೆ. ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ನೀಡಲು ಆರಂಭಿಸುತ್ತದೆ.

‘ಎಸ್ಎಪಿ’ ಕಂಪೆನಿಯಲ್ಲಿ ಕೆಲವು ವರ್ಷಗಳ ದುಡಿಮೆ ನಂತರ ಸ್ವತಂತ್ರವಾಗಿ ಏನಾದರೂ ಮಾಡಬೇಕೆಂದುಕೊಂಡವರು ಭರತ್ ಕುಮಾರ್ ಮೋಹನ್, ಆದಿತ್ಯನಾಗ್ ನಾಗೇಶ್, ವೆಂಕಟೇಶ್ ಶರ್ಮ ಮತ್ತಿತರರು. ಅಂತರ್ಜಾಲದ ಓದುಗರನ್ನೇ ಗಮನದಲ್ಲಿಟ್ಟುಕೊಂಡು ಈ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ.

ನಮ್ಮ ಮೊಬೈಲ್ನಲ್ಲಿರುವ ಬ್ರೌಸರ್ಗಳಲ್ಲಿ ಈ ಹಿಂದೆ ತಡಕಾಡಿದ ವಿಷಯಗಳನ್ನೇ ಆಧರಿಸಿ ‘ರೀಡಿಂಗ್ ಕಾರ್ಡ್’ಗಳನ್ನು ಇದು ಸಿದ್ಧಪಡಿಸುತ್ತದೆ. ಇದೇ ಸ್ಲೈಡ್ ಶೋಗಳಂತೆ ಪರದೆಯ ಮೇಲೆ ಮೂಡುತ್ತಿರುತ್ತದೆ. ಇದರಿಂದ ಓದುಗ ತಾನು ಈ ಹಿಂದೆ ಓದಿದ ಸುದ್ದಿ ಹಾಗೂ ಓದುತ್ತಿರುವ ಸುದ್ದಿ ಕುರಿತು ಮಾಹಿತಿ ಸಿಗಲಿದೆ.ಪಗ್ಮಾರ್ಕ್ಸ್ನ ಪರದೆಯ ಒಂದು ಮೂಲೆಯಲ್ಲಿರುವ ಗುಂಡಿಯನ್ನು ಒತ್ತಿದರೆ ಪರಿಣಿತರ ಹಾಗೂ ಸಂಪನ್ಮೂಲಗಳ ಪಟ್ಟಿಯ ಸಂಕ್ಷಿಪ್ತ ವಿವರ ಲಭ್ಯ. ಕಂಟೆಕ್ಷೆಟ್ ಎಂಜಿನ್ ಎಂದು ಕರೆಯಲಾಗುವ ಈ ವ್ಯವಸ್ಥೆಯ ಮೂಲಕ ಈ ಸ್ಮಾರ್ಟ್ ಬ್ರೌಸರ್ ತನ್ನಿಂತಾನೆ ಬಲಬದಿಗೆ ಬಂದು ಕುಳಿತುಕೊಳ್ಳುತ್ತದೆ.

‘ನಮ್ಮ ಸ್ಮಾರ್ಟ್ ಬ್ರೌಸರ್ ಓದುಗರು ಓದುತ್ತಿರುವ ವಿಷಯವನ್ನು ಗ್ರಹಿಸಿ ಗೂಗಲ್ಗೆ ಮತ್ತೆ ಮರಳದೇ ಬೇಕಾದ ಸುದ್ದಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಅತ್ಯಂತ ಪರಿಣಾಮಕಾರಿ ಆಲ್ಗಾರಿದಂ ಸಿದ್ಧಪಡಿಸಲಾಗಿದೆ’ ಎಂದೆನ್ನುತ್ತಾರೆ ಅದಿತ್ಯನಾಗ್ ನಾಗೇಶ್.

ಈ ತಂಡದ ನಾಯಕ ಭರತ್ ಮೋಹನ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿದ್ಯಾರ್ಥಿ. ಆದಿತ್ಯ ನಾಗೇಶ್ ಎಸ್ಎಪಿ ಹಾಗೂ ಗೂಗಲ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವೆಂಕಟೇಶ್ ಶರ್ಮ ಅವರು ಪಗ್ಮಾರ್ಕ್ಸ್ಗಾಗಿ ಹಲವು ನೂರು ಗಂಟೆಗಳ ಕಾಲ ಕೋಡಿಂಗ್ಗಾಗಿ ಕೆಲಸ ಮಾಡಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ರೂಪ ಪಡೆದ ಪಗ್ಮಾರ್ಕ್ಸ್ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಬಾರಿ ಡೌನ್ಲೋಡ್ ಆಗಿದೆ. ಭಾರತ ಸೇರಿದಂತೆ ಅಮೆರಿಕ, ಫಿಲಿಪ್ಪೀನ್ಸ್, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಬಹುಬೇಡಿಕೆ ಪಡೆದಿದೆ ಎನ್ನುತ್ತದೆ ಈ ತಂತ್ರಜ್ಞರ ತಂಡ.

ಇವರ ಯೋಜನೆಗೆ ಐಟಿ ಕ್ಷೇತ್ರದ ದಿಗ್ಗಜರು ಹಾಗೂ ಹಲವು ಸಂಘ ಸಂಸ್ಥೆಗಳು ಹಣ ಹೂಡಿಕೆ ಮಾಡಿ ಯೋಜನೆ ಸಾಕಾರಗೊಳ್ಳಲು ಹಾಗೂ ಮುಂದಿನ ಯೋಜನೆಗಳಿಗೆ ನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.