ಹುಬ್ಬಳ್ಳಿ: ಸೌಣಕ್ ಬಿಸ್ವಾಸ್ ಹಾಗೂ ವೆಂಕಟೇಶ ನಾಗಪುರ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಭಟ್ಕಳ ಅಂಜುಮನ್ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ.

ನಗರದ ನೆಹರು ಮೈದಾನದಲ್ಲಿ ನಡೆಯುತ್ತಿರುವ `ಮಿಡ್ಮ್ಯಾಕ್ ಕಪ್~ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯ ಎರಡನೇ ದಿನವಾದ ಶುಕ್ರವಾರದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಟ್ಕಳ ಅಂಜುಮನ್ ಕ್ರಿಕೆಟ್ ತಂಡ ನಿಗದಿತ 25 ಓವರುಗಳಲ್ಲಿ 197 ರನ್ ಪೇರಿಸಿತು. ತಂಡದ ಪರ ಆರಂಭಿಕ ಆಟಗಾರ ಅಫ್ಜನ್ 42 ಹಾಗೂ ಜಮೀರ್ 43 ರನ್ ಬಾರಿಸುವ ಮೂಲಕ ಉತ್ತಮ ಮೊತ್ತ ಕಲೆಹಾಕಲು ಕಾರಣರಾದರು.

ಗುರಿ ಬೆನ್ನುಹತ್ತಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ 5 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸುವ ಮೂಲಕ ಕಡೆಯ ಓವರ್ನಲ್ಲಿ ಗೆಲುವು ಸಾಧಿಸಿತು. ವಿಜೇತ ತಂಡದ ಪರ ಬಿಸ್ವಾಸ್ 73 ರನ್ ಗಳಿಸಿದರೆ, ವೆಂಕಟೇಶ್ ಅಜೇಯ 54 ರನ್ ಮೂಲಕ ಗೆಲುವಿಗೆ ಸಾಥ್ ನೀಡಿದರು.

ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ಗೆ ಗೆಲುವು: ದಿನದ ಮತ್ತೊಂದು ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡ ಧಾರವಾಡ ವಿಲಾಸ್ ಬೇಂದ್ರೆ ಕ್ರಿಕೆಟ್ ಅಕಾಡೆಮಿ ವಿರುದ್ಧ 4 ವಿಕೆಟ್ ಅಂತರದಿಂದ ಗೆಲುವು ಪಡೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವಿಲಾಸ್ ಬೇಂದ್ರೆ ಅಕಾಡೆಮಿ 24.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಎದುರಾಳಿ ತಂಡದ ಪರ ಮನೋಜ್ ಮಲ್ಹೋತ್ರ 13 ರನ್ಗೆ 4 ವಿಕೆಟ್ ಉರುಳಿಸುವ ಮೂಲಕ ವಿಲಾಸ ಬೇಂದ್ರೆ ತಂಡವನ್ನು ಕಟ್ಟಿಹಾಕಿದರು. ಉತ್ತರವಾಗಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆತಿಫ್ ಕೇವಲ 38 ಎಸೆತಗಳಲ್ಲಿ 60 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದಿತ್ತರು.

ಸಂಕ್ಷಿಪ್ತ ಸ್ಕೋರ್: ಭಟ್ಕಳ ಅಂಜುಮನ್ ಕ್ಲಬ್: 25 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 197 ರನ್ (ಅಫ್ಜನ್ 42, ಜಮೀರ್ 43, ಗುರುರಾಜ್ ಚೌಹಾಣ್ 23ಕ್ಕೆ 2); ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ: 25 ಓವರುಗಳಲ್ಲಿ 5 ವಿಕೆಟ್ಗೆ 200 (ಸೌಣಕ್ ಬಿಸ್ವಾಸ್ 72, ವೆಂಕಟೇಶ ನಾಗ್ಪುರ ಔಟಾಗದೇ 54, ನುಫೈಲ್ 39ಕ್ಕೆ 2, ಮುತಾಲ್ 36ಕ್ಕೆ 2) ಫಲಿತಾಂಶ: ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಗೆ 5 ವಿಕೆಟ್ ಅಂತರದ ಗೆಲುವು. ಪಂದ್ಯಪುರುಷ: ಸೌಣಕ್ ಬಿಸ್ವಾಸ್

ವಿಲಾಸ್ ಬೇಂದ್ರೆ ಕ್ರಿಕೆಟ್ ಅಕಾಡೆಮಿ: 24.3 ಓವರ್ಗಳಲ್ಲಿ 158ಕ್ಕೆ ಆಲ್ಔಟ್ (ಶಕೀಲ್ 31, ಗಿರಿಧರ 27, ಮನೋಜ್ ಮಲ್ಹೋತ್ರ 13ಕ್ಕೆ 4, ಎಸ್.ಹರೀಶ್ 15ಕ್ಕೆ 2). ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್: 20 ಓವರ್ಗಳಲ್ಲಿ 6 ವಿಕೆಟ್ಗೆ 160 (ಆತಿಫ್ ವಾಡಾ 60, ಎಸ್. ಹರೀಶ್ 31. ಗಿರಿಧರ್ 24ಕ್ಕೆ 3) ಫಲಿತಾಂಶ: ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ಗೆ 4 ವಿಕೆಟ್ ಅಂತರದ ಗೆಲುವು. ಪಂದ್ಯಪುರುಷ: ಮನೋಜ್ ಮಲ್ಹೋತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.