ಮಿಡ್ ನೈಟ್... ಶಾಲಭಂಜಿಕೆ

ಗುರುವಾರ , ಮೇ 23, 2019
26 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮಿಡ್ ನೈಟ್... ಶಾಲಭಂಜಿಕೆ

Published:
Updated:

ಅಂತರಂಗ, ರಂಗಶಂಕರ:  ಗುರುವಾರ ಡಾ. ಜಿ.ವಿ. ಗಣೇಶಯ್ಯ ಅವರ ಕಥೆಯನ್ನು ಆಧರಿಸಿದ `ಶಾಲಭಂಜಿಕೆ~ ಐತಿಹಾಸಿಕ ನಾಟಕ ಪ್ರದರ್ಶನ (ರಂಗರೂಪ: ಎಸ್. ಆರ್.ಗಿರೀಶ್. ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾಂ. ನಿರ್ವಹಣೆ: ಅಂಕಲ್‌ಶ್ಯಾಂ).ಹವ್ಯಾಸಿ ರಂಗಭೂಮಿಯಲ್ಲಿ 30ವರ್ಷಗಳಿಂದ ಕ್ರಿಯಾಶೀಲವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಂತರಂಗ ತಂಡವು ಶಾಲಭಂಜಿಕೆ ಚಾರಿತ್ರಿಕ ನಾಟಕ ಪ್ರದರ್ಶಿಸುತ್ತಿದೆ. ಇದು ಮೊದಲು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಇತಿಹಾಸದ ಗರ್ಭದಲ್ಲಿ ಅಡಗಿರುವ ಸಂಗತಿಗಳನ್ನು ಹೊರಕ್ಕೆಳೆದು, ಹೊಸ ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕ ವಾಗಿ ನಾಟಕವನ್ನು ಹೆಣೆಯಲಾಗಿದೆ. ಚರಿತ್ರೆಯ ಪುಟಗಳಲ್ಲಿ ಮರೆಯಾದ ಕೆಲ ಸತ್ಯಗಳನ್ನು ಹೆಕ್ಕಿ ತೆಗೆಯುವುದು ಹೊಸ ಇತಿಹಾಸ ರಚಿಸುವುದಷ್ಟೆ ಸಾಹಸ ಮಯ ಎಂಬುದನ್ನು ನಾಟಕದಲ್ಲಿ ಕಾಣಬಹುದು. ಟಿಕೆಟ್ ದರ 50ರೂ. ಮಾಹಿತಿಗೆ: 98809 140509ಶುಕ್ರವಾರ ಇಂಡಿಯನೋಸ್ಟ್ರಂ ಥಿಯೇಟರ್ ತಂಡದಿಂದ `ಮಿಡ್‌ನೈಟ್ ಟ್ರಾವೆಲರ್~ ಬಹುಭಾಷಾ ನಾಟಕ ಪ್ರದರ್ಶನ (ನಿರ್ದೇಶನ: ಕೊಮರಾನೆ ವಾಲ್ವಾನೆ).

ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ನಿತ್ಯ ಸಂಜೆ 7.30.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry