ಗುರುವಾರ , ಜೂನ್ 24, 2021
25 °C

ಮೀನುಗಾರರ ಬಿಡುಗಡೆ ಪ್ರಧಾನಿಗೆ ಜಯಲಲಿತಾ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ‘ತಮಿಳು ಮೀನು­ಗಾರರ ಸಮಸ್ಯೆ ಕುರಿತು ಕೇಂದ್ರ ಸರ್ಕಾರ ಪರಿಣಾಮಕಾರಿಯಲ್ಲದ ಮತ್ತು ದುರ್ಬಲ ನೀತಿ ಅನುಸರಿ­ಸುತ್ತಿದೆ’ ಎಂದು ಆರೋಪಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಶ್ರೀಲಂಕಾ ನೌಕಾದಳ ಬಂಧಿಸಿರುವ ತಮಿಳು ಮೀನುಗಾರರ ಬಿಡುಗಡೆಗೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಪ್ರಧಾನಿ ಸಿಂಗ್‌ ಅವರನ್ನು ಒತ್ತಾಯಿಸಿದ್ದಾರೆ.ಈ ಸಂಬಂಧ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಶುಕ್ರವಾರ ಜಯಲಲಿತಾ ಪತ್ರ ಬರೆದಿದ್ದಾರೆ. ಉಭಯ ದೇಶಗಳ ಮೀನು­ಗಾರರ ಸಮಸ್ಯೆ ಕುರಿತು ಮಾ.13ರಂದು ಕೊಲಂಬೊದಲ್ಲಿ ಮಾತುಕತೆ ನಡೆಯಲಿದೆ. ಈ ಮಾತುಕತೆಗೆ ಮುನ್ನವೇ ಶ್ರೀಲಂಕಾ ನೌಕಾಪಡೆ ಉದ್ದೇಶಪೂರ್ವಕವಾಗಿ ಸೌಹಾರ್ದ ವಾತಾವರಣವನ್ನು ಹಾಳುಮಾಡುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.ಶ್ರೀಲಂಕಾ ವಶದಲ್ಲಿರುವ 177 ತಮಿಳುನಾಡು ಮೀನುಗಾರರು ಮತ್ತು 44 ದೋಣಿಗಳನ್ನು ಬಿಡು­ಗಡೆ ಮಾಡಲು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ನಡೆಸು­ವಂತೆ ಪ್ರಧಾನಿ ಅವರನ್ನು ಆಗ್ರಹಿಸಿದ್ದಾರೆ.‘ಈ ಸಂಬಂಧ ಮಾ.4ರಂದೇ ಪ್ರಧಾನಿಗೆ ಪತ್ರ ಬರೆದಿದ್ದೆ. ಆ ನಂತರವೂ ತಮಿಳುನಾಡು ಮೀನು­ಗಾ­ರರನ್ನು ಬಂಧಿಸುವ ಎರಡು ಪ್ರಕರಣಗಳು ನಡೆದಿದ್ದು, ಶ್ರೀಲಂಕಾ ನೌಕಾಪಡೆ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗುತ್ತಿದೆ’ ಎಂದು ಜಯಲಲಿತಾ ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.