ಮಂಗಳವಾರ, 22 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಸರ್ಕಾರಿ ನೌಕರರಿಗೆ ಇಂದು ಶುಭ ದಿನ
Published 20 ಜುಲೈ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೈನಂದಿನ ಬದುಕಿನಲ್ಲಿ  ಇರುವ ವ್ಯಕ್ತಿಗಳ ಸಹವಾಸದಿಂದ ಅಪವಾದಗಳಿಗೆ ತುತ್ತಾಗುವಿರಿ. ಹಿಂದಿನ ಕಹಿ ಘಟನೆ ಮರೆಯಲು ಒಳ್ಳೆಯ ಸಮಯ ಸಿಗುವುದು. ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜಯವಾಗುವುದು.
ವೃಷಭ
ಜ್ಞಾನಿಗಳು ಪರಂಪರೆಯನ್ನು ಉಳಿಸಲು ಯೋಗ್ಯ ಶಿಷ್ಯನನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಹುದ್ದೆಯಲ್ಲಿದ್ದು, ಉನ್ನತ ಮಟ್ಟದ ಪದವಿಗೆ ಪ್ರಯತ್ನ ಪಡುತ್ತಿರುವವರಿಗೆ ಶುಭವಾಗುವುದು.
ಮಿಥುನ
ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ. ವೈದ್ಯಕೀಯ ಹಾಗೂ ಎಂಜಿನಿಯರ್ ಕ್ಷೇತ್ರಗಳಿಗೆ ಹೋಗಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಸಿಗಲಿದ್ದಾರೆ.
ಕರ್ಕಾಟಕ
ಪರಿಣತರಿಗೆ ಶಿಕ್ಷಣ ವೃತ್ತಿ ದೊರೆಯುವ ಸಂಭವವಿದೆ. ಯೋಚನೆಯಂತೆ ಕೆಲಸ ಸಾಗದಿರುವ ಕಾರಣ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸುವುದು ಉತ್ತಮ.
ಸಿಂಹ
ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ನೀಡುವ ಬಗ್ಗೆ ಯೋಚನೆ ನಡೆಸಿ, ಸಮಯ ಎಂದಾಗ ಅವರ ಸಹಾಯವೇ ಮುಖ್ಯ. ಮಂದಗತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಯದ ಕೊರತೆ ಎದುರಾಗಲಿದೆ.
ಕನ್ಯಾ
ಕಾರ್ಯನಿರ್ವಹಿಸಲು ಪರಿಣತರಿಂದ ಸುಲಭ  ಉಪಾಯವನ್ನು ಪಡೆದು ಸಂತೋಷವಾಗಲಿದೆ. ಬೇರೆಯವರ ಮನಸ್ಸಿಗೆ ನೋವಾಗುವಂಥ ಮಾತುಗಳು ಬಳಸದೇ ಇರುವುದು ಉತ್ತಮ.
ತುಲಾ
ಮನೆಯ ಆರ್ಥಿಕ ಸ್ಥಿತಿಯಲ್ಲಿ ಹಂತ ಹಂತವಾಗಿ ಸುಧಾರಣೆಯನ್ನು ಕಂಡು ಮನಸ್ಸಿಗೆ ನೆಮ್ಮದಿ ಇರುವುದು. ಮನೆಯಲ್ಲಿ ಮಕ್ಕಳಿಂದ ಸಂಭ್ರಮದ ವಾತಾವರಣ ಮೂಡುವುದು. ಗಂಟಲು ಬೇನೆ ನಿರ್ಲಕ್ಷಿಸುವುದು ಸರಿಯಲ್ಲ.
ವೃಶ್ಚಿಕ
ಹಿಂದೆ ಮಗನ ಒಳಿತಿಗಾಗಿ, ಅಭ್ಯುದಯಕ್ಕಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸಬಹುದಾಗಿದೆ. ವೃತ್ತಿಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿ.
ಧನು
ಕಾರ್ಯದಲ್ಲಿ ಅವಸರ ಮಾಡದೆ ನಿಧಾನವಾಗಿ ಮುಂದುವರಿದರೆ ಸರಾಗವಾಗಿ ನಡೆಯುವುದು. ಆಲಂಕಾರಿಕ ವಸ್ತುಗಳಿಗಾಗಿ ಧನವ್ಯಯ ಆಗಲಿದೆ. ಹತ್ತಿ ವಸ್ತ್ರಗಳ ಬೇಡಿಕೆಯಿಂದಾಗಿ ವರಮಾನ ಹೆಚ್ಚಲಿದೆ.
ಮಕರ
ರಾಜಕಾರಣಿಗಳು ಎಲ್ಲರೊಂದಿಗೆ ಸಹಕಾರ ಮನೋಭಾವನೆಯಿಂದ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು  ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತದೆ. ಸಂತಾನದ ಶುಭ ಸುದ್ದಿ  ಕೇಳುವಿರಿ.
ಕುಂಭ
ಚಂಚಲ ಸ್ವಭಾವದ ನೀವು ಅಚಲವಾದ ನಿರ್ಧಾರಗಳನ್ನು ಮಾಡುವುದು ಉಳಿತು. ಧಾರ್ಮಿಕ ಕೆಲಸದಲ್ಲಿ ಶ್ರದ್ಧೆ ತೋರಿದಷ್ಟೂ, ದಾರಿ ಕಾಣಬಹುದು. ಗಣಪತಿಯ ಆರಾಧನೆ ವಿಘ್ನಗಳನ್ನು ನಿವಾರಣೆ ಮಾಡುತ್ತದೆ.
ಮೀನ
ಸಹಾಯ ಅಪೇಕ್ಷಿಸಿ ಬಂದವರನ್ನು ತಿರಸ್ಕರಿಸಬೇಡಿ. ವರ್ಚಸ್ಸನ್ನು ವೃದ್ಧಿಸಿಕೊಳ್ಳಲು  ಇತರರ ಜೊತೆ ಸಂವಾದದಲ್ಲಿ ಉತ್ತಮ ಭಾಷೆ ಬಳಸಿ. ಕಬ್ಬಿಣ ಮತ್ತು ಸ್ಟೀಲ್ ವ್ಯಾಪಾರಿಗಳಿಗೆ ಲಾಭವಾಗುವುದು.
ADVERTISEMENT
ADVERTISEMENT