ಗುರುವಾರ , ಮೇ 13, 2021
24 °C

ಮುಂಗಾರು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮುಂಗಾರು ಕ್ಷೀಣಿಸಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಮಳೆಯಾಗಿದೆ.ಪಣಂಬೂರು, ಬೀಳಗಿ, ತಾಳಿಕೋಟೆಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಗದಗ, ಬಬಲೇಶ್ವರ, ತಿಕ್ಕೋಟ, ಚಿಂಚೋಳಿ 6, ಮಂಗಳೂರು, ಹುಕ್ಕೇರಿ, ಬಸವನ ಬಾಗೇವಾಡಿ, ಬೀದರ್, ಜಾಲಹಳ್ಳಿ 5, ಉಡುಪಿ, ಹಿಡಕಲ್ ಅಣೆಕಟ್ಟು, ಕುಡಚಿ 4, ಮಂಗಳೂರು ವಿಮಾನ ನಿಲ್ದಾಣ, ಸಿದ್ದಾಪುರ, ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ, ಸಂಕೇಶ್ವರ, ಕಲಘಟಗಿ, ಬೆಳ್ಳಾಟಿ, ಜಮಖಂಡಿ, ಆಲಮಟ್ಟಿ, ಮುದ್ದೇಬಿಹಾಳ, ಭಾಲ್ಕಿ, ಚಿಟಗುಪ್ಪ, ಸೇಡಂ, ಶಹಾಪುರ, ಮಾನ್ವಿ, ಹರಪನಹಳ್ಳಿ, ತೆಲಗಿ 3, ಮುಲ್ಕಿ, ನವಲಗುಂದ, ಹುನಗುಂದ, ಹುಮನಾಬಾದ್, ಬಸವಕಲ್ಯಾಣ, ಕಮಲಾಪುರ, ಎಚ್.ಡಿ.ಕೋಟೆ, ಸರಗೂರು, ಹಡಗಲಿ 2, ಪುತ್ತೂರು, ಸುಬ್ರಹ್ಮಣ್ಯ, ಭಟ್ಕಳ, ಗೋಕರ್ಣ, ಮುಧೋಳ, ದೇವರ ಹಿಪ್ಪರಗಿ, ನಾರಾಯಣಪುರ, ಮಸ್ಕಿ, ಭಾಗಮಂಡಲ, ಹೊಸನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.