ಭಾನುವಾರ, ಮೇ 16, 2021
28 °C

ಮುಂಗಾರು ಮಳೆ: ಕ್ರೀಡಾಕೂಟಗಳಿಗೆ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಮುಂಗಾರು ಮಳೆ ಸಾಧಾರಣವಾಗಿ ಸುರಿದಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳ ಮೊದಲ ವಾರ ಆರಂಭವಾದ ಮುಂಗಾರು ಮಳೆ ಕಳೆದ ಬಾರಿಗಿಂತ ಈ ವರ್ಷ ಉತ್ತಮವಾಗಿ ಸುರಿಯುತ್ತಿದೆ. ಮಡಿಕೇರಿಯಲ್ಲಿ ಶನಿವಾರ ತಡ ರಾತ್ರಿಯಿಂದ ಆರಂಭವಾದ ಮಳೆ ಭಾನುವಾರವು ಕೂಡ ಮುಂದುವರೆದಿದೆ.ಇದೀಗ ಜಿಲ್ಲೆಯಲ್ಲಿ ಮುಂಗಾರು ಮಳೆಯಾಗು ತ್ತಿರುವ ಹಿನ್ನೆಲೆಯಲ್ಲಿ ಕೆಸರು ಗದ್ದೆಯ ಕ್ರೀಡಾಕೂಟಗಳು ಆರಂಭವಾಗಿವೆ. ಕೊಡಗಿನ ವಿಶೇಷವಾಗಿ ಕೆಸರು ಗದ್ದೆ ಓಟ, ವಾಲಿಬಾಲ್ ಪಂದ್ಯಾಟ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಅಲ್ಲಲ್ಲಿ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ನಾಪೋಕ್ಲುವಿನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಳೆಯನ್ನು ಲೆಕ್ಕಿಸದೇ ಭಾಗವಹಿಸಿದ್ದ ಕ್ರೀಡಾಸಕ್ತರು ಮಳೆ, ಗಾಳಿ ಚಳಿಯನ್ನು ಮರೆತು ತಮ್ಮ ನೆಚ್ಚಿನ ಕ್ರೀಡಾಸ್ಪರ್ಧಿ ಗಳನ್ನು ಹುರಿದುಂಬಿಸಿದ ದೃಶ್ಯ ವಿಶೇಷವಾಗಿತ್ತು.ಜಿಲ್ಲೆಯ ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಮಳೆ ಉತ್ತಮ ಆರಂಭದ ಮುನ್ಸೂಚನೆ ನೀಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯ ಗೊಂಡಂತೆ 24 ಗಂಟೆಯಲ್ಲಿ 19.81 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.89 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 697.33 ಮಿ.ಮೀ. ಮಳೆ ಬಿದ್ದಿದೆ.ಮಡಿಕೇರಿ ತಾಲ್ಲೂಕಿನಲ್ಲಿ 30.95 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9.20 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಸರಾಸರಿ 112.09 ಮಿ.ಮೀ. ಮಳೆ ಸುರಿದಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 10.25 ಮಿ.ಮೀ. ಮಳೆ ಬಿದ್ದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2.65 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 522.72 ಮಿ.ಮೀ. ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ 18.23 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.83 ಮಿ.ಮೀ. ಮಳೆಯಾಗಿತ್ತು. ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 559.10 ಮಿ.ಮೀ. ಮಳೆ ದಾಖಲಾಗಿದೆ.ಹೋಬಳಿವಾರು ಮಳೆಯ ವಿವರ: ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 47.2 ಮಿ.ಮೀ., ನಾಪೋಕ್ಲುವಿನಲ್ಲಿ 15.4 ಮಿ.ಮೀ., ಸಂಪಾಜೆ 34.2 ಮಿ.ಮೀ., ಭಾಗಮಂಡಲ 27.00 ಮಿ.ಮೀ., ವಿರಾಜಪೇಟೆ 10.06 ಮಿ.ಮೀ., ಹುದಿಕೇರಿ 21.03 ಮಿ.ಮೀ., ಶ್ರೀಮಂಗಲ 13.02, ಪೊನ್ನಂಪೇಟೆ 7.04, ಅಮ್ಮತ್ತಿ 2.00 ಮಿ.ಮೀ., ಬಾಳಲೆ 7.00 ಮಿ.ಮೀ., ಸೋಮವಾರಪೇಟೆ 18.04 ಮಿ.ಮೀ., ಶನಿವಾರಸಂತೆ16.08 ಮಿ.ಮೀ., ಶಾಂತಳ್ಳಿ 45.02 ಮಿ.ಮೀ., ಕೋಡ್ಲಿಪೇಟೆ 9.00 ಮಿ.ಮೀ., ಕುಶಾಲನಗರ 11.00 ಮಿ.ಮೀ., ಸುಂಟಿಕೊಪ್ಪ 9.00 ಮಿ.ಮೀ. ಮಳೆ ದಾಖಲಾಗಿದೆ.ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ನೀರಿನ ಸಂಗ್ರಹಣೆಯ ಗರಿಷ್ಠ ಮಟ್ಟ 2,859 ಅಡಿಗಳು, ಇಂದು 2829.63 ಅಡಿ ನೀರು ಸಂಗ್ರವಾಗಿದೆ. ಭಾನುವಾರ ಜಲಾಶಯಕ್ಕೆ ನೀರಿನ ಒಳ ಹರಿವು 937 ಕ್ಯೂಸೆಕ್ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.