ನವದೆಹಲಿ (ಪಿಟಿಐ): ಮುಂಗಾರು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಈ ಬಾರಿ ಇಳುವರಿ ಕುಸಿಯುವ ಸಾಧ್ಯತೆ ಇದ್ದು, ಬೆಲೆಯಲ್ಲಿಯೂ ಭಾರಿ ಏರಿಕೆ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಮುಂಗಾರು ವೈಫಲ್ಯ `ಅಕ್ಟೋಬರ್ -ಡಿಸೆಂಬರ್~ ಅವಧಿಯ ಈರುಳ್ಳಿ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸದ್ಯ ಈರುಳ್ಳಿ ಕೆ.ಜಿಗೆ ರೂ10ರಿಂದ ರೂ15 ಇದ್ದು, ನಂತರದಲ್ಲಿ ಹೆಚ್ಚಬಹುದು ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಅಭಿವೃದ್ಧಿ ಪ್ರತಿಷ್ಠಾನ(ಎನ್ಎಚ್ಆರ್ಡಿಎಫ್) ನಿರ್ದೇಶಕ ಆರ್.ಪಿ.ಗುಪ್ತಾ ಹೇಳಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆಯಾಗುವ ಈರುಳ್ಳಿ ಡಿಸೆಂಬರ್ಗೆ ಕೊಯ್ಲಿಗೆ ಬರುತ್ತದೆ. ಆದರೆ, ಮಳೆ ಕೊರತೆಯಿಂದ ನಾಸಿಕ್ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಬಿತ್ತನೆ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿದೆ ಎಂದು `ಎನ್ಎಚ್ಆರ್ಡಿಎಫ್~ ಹೇಳಿದೆ.

`ಸದ್ಯ ದೇಶದಲ್ಲಿ 18 ಲಕ್ಷ ಟನ್ಈರುಳ್ಳಿ ದಾಸ್ತಾನಿದ್ದು, ಸದ್ಯದ ಬೇಡಿಕೆ ಪೂರೈಸುವಷ್ಟಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ 32 ಸಾವಿರ ಟನ್ ಈರುಳ್ಳಿ ರಫ್ತು ಮಾಡಲಾಗಿದೆ~ ಎಂದು ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.