ಗುರುವಾರ , ಏಪ್ರಿಲ್ 15, 2021
24 °C

ಮುಂದುವರಿದ ಸಮಸ್ಯೆ: ನಗರದ ವಿವಿಧೆಡೆ ಕಸದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ಗುರುವಾರ ಕೂಡಾ ಮುಂದುವರಿದಿದೆ. ವಿಜಯನಗರ, ಕಂಠೀರವನಗರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಟಿ.ದಾಸರಹಳ್ಳಿ, ಭಾರತಿನಗರ, ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ ವಿವಿಧ ಬಡಾವಣೆಗಳ ರಸ್ತೆಗಳ ಬದಿಯಲ್ಲಿ ಕಸ ಬಿದ್ದಿದ್ದು ಕಂಡುಬಂತು.`ಬಡಾವಣೆಯ ರಸ್ತೆಗಳ ಬದಿಯಲ್ಲಿ ಕಸ ರಾಶಿ ಬೀಳುತ್ತಿದೆ. ಕೆಲ ವಾರಗಳ ಹಿಂದೆ ಪ್ರತಿದಿನ ಕಸವನ್ನು ಎತ್ತಲಾಗುತ್ತಿತ್ತು. ಈಗ ಮೂರು ದಿನಗಳಿಗೆ ಒಮ್ಮೆಯೂ ಕಸ ವಿಲೇವಾರಿಯಾಗುತ್ತಿಲ್ಲ. ಮನೆಗಳಿಂದ ಕಸ ಸಂಗ್ರಹವೂ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ರಸ್ತೆಗಳ ಬದಿಯಲ್ಲಿ ಕಸ ಬೀಳುತ್ತಿದೆ~ ಎಂದು ವಿಜಯನಗರದ ನಿವಾಸಿ ಚಿದಾನಂದ ದೂರಿದರು.`ಕಸದ ಸಮಸ್ಯೆಯ ಬಗ್ಗೆ ಮತ್ತೆ ಬಿಬಿಎಂಪಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ರಸ್ತೆಗಳ ಪಕ್ಕದಲ್ಲಿ ಬೀಳುತ್ತಿರುವ ಕಸವನ್ನು ಎತ್ತದೇ ಇರುವುದರಿಂದ ಸಮಸ್ಯೆ ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ. ನಗರದಲ್ಲಿ ಮತ್ತೆ ಕಸದ ಸಮಸ್ಯೆ ಬಿಗಡಾಯಿಸಲಿದೆ~ ಎಂದು ಮಹಾಲಕ್ಷ್ಮೀ ಲೇಔಟ್‌ನ ನಿವಾಸಿ ನಾಗರಾಜ್ ಆರೋಪಿಸಿದರು.ಹತ್ತು ಗಂಟೆಯ ನಂತರವೇ ಪ್ರವೇಶ: ನಗರದಿಂದ ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸುರಿಯಲು ಹೋಗುವ ಲಾರಿಗಳು ರಾತ್ರಿ ಹತ್ತು ಗಂಟೆಯ ನಂತರವೇ ಘಟಕವನ್ನು ಪ್ರವೇಶಿಸಬೇಕು ಎಂದು ಸ್ಥಳೀಯ ಪೊಲೀಸರು ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.ರಾತ್ರಿ ಹತ್ತು ಗಂಟೆಗೂ ಮುನ್ನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಲಾರಿಗಳು ಪ್ರವೇಶಿಸುವುದಕ್ಕೆ ಸ್ಥಳೀಯ ಗ್ರಾಮಸ್ಥರ ವಿರೋಧವಿದ್ದುದರಿಂದ ಪೊಲೀಸರು ಈ ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಗುರವಾರ ರಾತ್ರಿ ಮಂಡೂರು ಮುಖ್ಯರಸ್ತೆಯಲ್ಲಿ ಕಸ ಹೊತ್ತ ಲಾರಿಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ನಾಳೆಯಿಂದ ಸಂಚಾರ ವ್ಯವಸ್ಥೆ ಬದಲು

ಪ್ರಜಾವಾಣಿ ವಾರ್ತೆ

ಬೆಂಗಳೂರು: ಬಿಡಿಎ ಜಾಲಹಳ್ಳಿಯ ಬಿಇಎಲ್ ವೃತ್ತದಿಂದ ಕುವೆಂಪು ವೃತ್ತದವರೆಗೆ ಅಂಡರ್‌ಪಾಸ್ ವಿಸ್ತರಣೆ ಮತ್ತು ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ (ನ.10) ಜಾರಿಗೆ ಬರುವಂತೆ ಸುತ್ತಮುತ್ತಲ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಿಡಿಎ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು 90 ದಿನಗಳ ಕಾಲಾವಕಾಶ ಕೋರಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ವಾಹನ ಸವಾರರು ಸಾಧ್ಯವಾದಷ್ಟು ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.ಹೆಬ್ಬಾಳ ಹೊರ ವರ್ತುಲ ರಸ್ತೆಯಿಂದ ನ್ಯೂ ಬಿಇಎಲ್ ರಸ್ತೆಗೆ ಹೋಗುವ ವಾಹನಗಳು ಅಂಡರ್‌ಪಾಸ್‌ನಲ್ಲಿ ಚಲಿಸದೆ ಎಡ ತಿರುವು ಪಡೆದು ಸರ್ವಿಸ್ ರಸ್ತೆ ಮೂಲಕ ಕುವೆಂಪು ವೃತ್ತಕ್ಕೆ ಬಂದು ಕಡ್ಡಾಯವಾಗಿ ಎಡಕ್ಕೆ ತಿರುಗಿ ಮುಂದೆ ಸಾಗಬೇಕು.ಯಶವಂತಪುರ, ಮತ್ತೀಕೆರೆ ಕಡೆಗೆ ಹೋಗುವ ವಾಹನಗಳು ಅಂಡರ್‌ಪಾಸ್ ರಸ್ತೆಯಲ್ಲಿ ಸಾಗಿ ನಂಜುಂಡಪ್ಪ ಪೆಟ್ರೋಲ್ ಬಂಕ್ ಬಳಿ ಎಡಕ್ಕೆ ತಿರುಗಿ ಪೈಪ್‌ಲೈನ್ ರಸ್ತೆ, ಎಚ್‌ಎಂಟಿ ಮುಖ್ಯರಸ್ತೆಗೆ ಬರಬೇಕು. ನಂತರ ಬಲ ತಿರುವು ಪಡೆದು ಮುಂದೆ ಹೋಗಬೇಕು. ಜಾಲಹಳ್ಳಿ, ವಿದ್ಯಾರಣ್ಯಪುರ, ಗಂಗಮ್ಮ ಸರ್ಕಲ್ ಕಡೆಗೆ ಹೋಗುವ ವಾಹನಗಳು ಎಡಕ್ಕೆ ತಿರುಗಿ ಮುಂದೆ ಸಾಗಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.