ಮೊಹಾಲಿ (ಪಿಟಿಐ): ಎರಡು ಬೌಂಡರಿ ಹಾಗೂ ಅಷ್ಟೇ ಸಿಕ್ಸರ್ ಸಿಡಿಸಿದ ಅಂಬಟಿ ರಾಯುಡು ಪಂದ್ಯದ ಸ್ವರೂಪವನ್ನೇ ಬದಲಿಸಿದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯೊಂದು ಎಸೆತವು ಬಾಕಿ ಇರುವಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ನಾಲ್ಕು ವಿಕೆಟ್ಗಳಿಂದ ರೋಚಕ ಗೆಲುವು.

ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಲೀಗ್ ಪಂದ್ಯದಲ್ಲಿ ಸಂಕಷ್ಟಗಳನ್ನು ನಿವಾರಿಸಿಕೊಂಡ ಹರಭಜನ್ ಸಿಂಗ್ ನಾಯಕತ್ವದ ತಂಡವು ಎರಡು ಪಾಯಿಂಟುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.

`ಟಾಸ್~ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಣಯ ಕೈಗೊಂಡ ಡೇವಿಡ್ ಹಸ್ಸಿ ನೇತೃತ್ವದ ಕಿಂಗ್ಸ್ ಇಲೆವೆನ್ ಆರಂಭದಲ್ಲಿ ಮಂದಗತಿಯಿಂದ ಸಾಗಿದರೂ, ಆನಂತರ ಉತ್ತಮ ಮೊತ್ತ ಗಳಿಸುವಲ್ಲಿ ಯಶಸ್ವಿ ಆಯಿತು. ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ ಅದು ಕೇವಲ ಮೂರು ವಿಕೆಟ್ಗಳನ್ನು ಕಳೆದುಕೊಂಡು 168 ರನ್ಗಳನ್ನು ಕಲೆಹಾಕಿತು.

ಆರಂಭಿಕ ಆಟಗಾರರಾದ ನಿತಿನ್ ಸೈನಿ ಹಾಗೂ ಮನ್ದೀಪ್ ಸಿಂಗ್ ಅವರು ಕಿಂಗ್ಸ್ ಇಲೆವೆನ್ ಇನಿಂಗ್ಸ್ಗೆ ಭದ್ರ ಬುನಾದಿ ಹಾಕುವಲ್ಲಿ ವಿಫಲರಾದರು. ಶಾನ್ ಮಾರ್ಷ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದ್ದರಿಂದ ಹಸ್ಸಿ ಬಳಗವು ಸಂಕಷ್ಟದಲ್ಲಿ ಸಿಲುಕಿತು. ರನ್ ಗತಿಯೂ ಚುರುಕು ಪಡೆಯಲಿಲ್ಲ. ಆದರೆ ಮಾರ್ಷ್ ನಿರ್ಗಮನದ ನಂತರ ನಾಯಕ ಡೇವಿಡ್ ಹಸ್ಸಿ ಜೊತೆಗೂಡಿದ ಡೇವಿಡ್ ಮಿಲ್ಲರ್ ಆಕ್ರಮಣಕಾರಿ ಆಟದಿಂದ ತಮ್ಮ ತಂಡದ ಬೆಂಬಲಿಗರು ಉತ್ಸಾಹದ ಅಲೆಯಲ್ಲಿ ತೇಲುವಂತೆ ಮಾಡಿದರು.

ಮುರಿಯದ ನಾಲ್ಕನೇ ವಿಕೆಟ್ನಲ್ಲಿ 89 ರನ್ಗಳನ್ನು ಕಲೆಹಾಕಿದ ಹಸ್ಸಿ (68; 40 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಮಿಲ್ಲರ್ (34; 17 ಎ., 1 ಬೌಂ., 3 ಸಿ.) ಅವರು ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ತಕ್ಕ ಉತ್ತರ ನೀಡುವ ಸಾಹಸ ಮಾಡಿದರು. ಇಂಡಿಯನ್ಸ್ ಪರವಾಗಿ ರುದ್ರ ಪ್ರತಾಪ್ ಸಿಂಗ್ ಬಿಗುವಿನ ದಾಳಿಯಿಂದ ಗಮನ ಸೆಳೆದರು.

ಗೆಲ್ಲಲು 169 ರನ್ಗಳನ್ನು ಗಳಿಸುವ ಸವಾಲು ಪಡೆದ `ಭಜ್ಜಿ~ ಪಡೆಯು ಗುರಿಯನ್ನು ಬೆನ್ನಟ್ಟಿದಾಗ ಆತುರ ಪಡಲಿಲ್ಲ. ಆದ್ದರಿಂದ ಒತ್ತಡದ ಸುಳಿಗೆ ಸಿಲುಕುವ ಅಪಾಯ ತಪ್ಪಿತು. ಆದರೂ ಒಂದು ಹಂತದಲ್ಲಿ ಪಂದ್ಯವು ಕಿಂಗ್ಸ್ ಇಲೆವೆನ್ ಹಿಡಿತಕ್ಕೆ ಬರುವುದೆನ್ನುವ ಅನುಮಾನವಂತೂ ಕಾಡಿತ್ತು. ಜೇಮ್ಸ ಫ್ರಾಂಕ್ಲಿನ್ ಹಾಗೂ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿದ್ದ 34 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ 52 ರನ್ಗಳ ಮೊದಲ ವಿಕೆಟ್ ಜೊತೆಯಾಟವು ಸಮಾಧಾನಕರ. `ಲಿಟಲ್ ಚಾಂಪಿಯನ್~ಗೆ ಅಜರ್ ಮಹ್ಮೂದ್ ಪೆವಿಲಿಯನ್ ದಾರಿ ತೋರಿಸಿದಾಗ ಮುಂಬೈ ಇಂಡಿಯನ್ಸ್ ತಂಡದ ಒಟ್ಟು ಮೊತ್ತ 59 ರನ್.

ಆನಂತರ ರೋಹಿತ್ ಶರ್ಮ (50; 30 ಎ., 3 ಬೌಂಡರಿ, 3 ಸಿಕ್ಸರ್) ಅವರು ತಮ್ಮ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಆದರೂ ಅವರು ವಿಕೆಟ್ ಒಪ್ಪಿಸಿದಾಗ ತಂಡಕ್ಕೆ ಅಗತ್ಯವಿದ್ದ ರನ್ ಹಾಗೂ ಲಭ್ಯವಿದ್ದ ಎಸೆತಗಳ ಅಂತರ ಹೆಚ್ಚಿತ್ತು. ಇಂಥ ಪರಿಸ್ಥಿತಿಯಲ್ಲಿ ನಾಯಕ ಹರಭಜನ್ ಕೂಡ ಸೊನ್ನೆ ಸುತ್ತಿದರು. ಪಂದ್ಯಕ್ಕೆ ನಾಟಕೀಯ ತಿರುವು ನೀಡಿದ ಶ್ರೇಯ ಪಡೆದ ರಾಯುಡು (34; 17 ಎ., 2 ಬೌಂ., 2 ಸಿ.) ಹಾಗೂ ರಾಬಿನ್ ಪೀಟರ್ಸನ್ (16; 7 ಎ., 2 ಬೌ., 1 ಸಿ.) ಅವರ ಶ್ರಮ ಸಾರ್ಥಕ. ಕೊನೆಯ ಹಂತದಲ್ಲಿ ಕಷ್ಟ ಎನಿಸಿದ್ದ ಗುರಿಯನ್ನು ಸುಲಭದ್ದಾಗಿಸಿದ್ದು ಮಾತ್ರ ರಾಯುಡು. ಆದ್ದರಿಂದ ಅವರಿಗೆ `ಪಂದ್ಯ ಶ್ರೇಷ್ಠ~ ಗೌರವ ಸಂದಿದ್ದು ಸರಿ.

ಇಂಥ ಇನಿಂಗ್ಸ್ ಇಷ್ಟ

ತಂಡದ ಗೆಲುವಿಗೆ ಕಾರಣ ವಾಗುವಂಥ ಇನಿಂಗ್ಸ್ ಸದಾ ಇಷ್ಟ. ಒತ್ತಡದ ಪರಿಸ್ಥಿತಿಯಲ್ಲಿ ಒಳ್ಳೆಯ ಆಟ ಸಾಧ್ಯವಾಯಿತು. ಅದೇ ಸಂತಸ. ಗುರಿ ಮುಟ್ಟುತ್ತೇವೆ ಎನ್ನುವ ವಿಶ್ವಾಸ ಖಂಡಿತ ಇತ್ತು. ನಾನೆಂದೂ ಸುಲಭವಾಗಿ ಕೈಚೆಲ್ಲಿ ನಿಲ್ಲುವುದಿಲ್ಲ.

- ಅಂಬಟಿ ರಾಯುಡು

ಕಿಂಗ್ಸ್ ಇಲೆವೆನ್ ಪಂಜಾಬ್: 20 ಓವರುಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 168

ನಿತಿನ್ ಸೈನಿ ಸಿ ಮುನಾಫ್ ಪಟೇಲ್ ಬಿ ಕ್ಲಿಂಟ್ ಮೆಕ್ಕೀ 17
ಮನ್ದೀಪ್ ಸಿಂಗ್ ಸಿ ದಿನೇಶ್ ಕಾರ್ತಿಕ್ ಬಿ ಆರ್.ಪಿ. ಸಿಂಗ್ 22
ಶಾನ್ ಮಾರ್ಷ್ ಸಿ ಹರಭಜನ್ ಸಿಂಗ್ ಬಿ ಜೇಮ್ಸ ಫ್ರಾಂಕ್ಲಿನ್ 17
ಡೇವಿಡ್ ಹಸ್ಸಿ ಔಟಾಗದೆ 68
ಡೇವಿಡ್ ಮಿಲ್ಲರ್ ಔಟಾಗದೆ 34
ಇತರೆ: (ವೈಡ್-9, ನೋಬಾಲ್-1) 10

ವಿಕೆಟ್ ಪತನ: 1-35 (ಮನ್ದೀಪ್ ಸಿಂಗ್; 5.2), 2-46 (ನಿತಿನ್ ಸೈನಿ; 7.4), 3-79 (ಶಾನ್ ಮಾರ್ಷ್; 12.5).

ಬೌಲಿಂಗ್: ರಾಬಿನ್ ಪೀಟರ್ಸನ್ 1-0-3-0, ರುದ್ರ ಪ್ರತಾಪ್ ಸಿಂಗ್ 4-0-27-1 (ವೈಡ್-1), ಕ್ಲಿಂಟ್ ಮೆಕ್ಕೀ 4-0-36-1, ಮುನಾಫ್ ಪಟೇಲ್ 4-1-41-0 (ನೋಬಾಲ್-1), ಹರಬಜನ್ ಸಿಂಗ್ 3-0-29-0 (ವೈಡ್-3), ಕೀರನ್ ಪೊಲಾರ್ಡ್ 3-0-27-0, ಜೇಮ್ಸ ಫ್ರಾಂಕ್ಲಿನ್ 1-0-5-1 (ವೈಡ್-1)

ಮುಂಬೈ ಇಂಡಿಯನ್ಸ್: 19.5 ಓವರುಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 171

ಜೇಮ್ಸ ಫ್ರಾಂಕ್ಲಿನ್ ಸಿ ನಿತಿನ್ ಸೈನಿ ಬಿ ಅಜರ್ ಮಹ್ಮೂದ್ 22
ಸಚಿನ್ ತೆಂಡೂಲ್ಕರ್ ಸಿ ನಿತಿನ್ ಸೈನಿ ಬಿ ಅಜರ್ ಮಹ್ಮೂದ್ 34
ರೋಹಿತ್ ಶರ್ಮ ಸಿ ಮಹ್ಮೂದ್ ಬಿ ಪರ್ವಿಂದರ್ ಆವನಾ 50
ದಿನೇಶ್ ಕಾರ್ತಿಕ್ ಸಿ ಮಹ್ಮೂದ್ ಬಿ ಪಿಯೂಶ್ ಚಾವ್ಲಾ 03
ಕೀರನ್ ಪೊಲಾರ್ಡ್ ಸಿ ಮನ್ದೀಪ್ ಬಿ ಪರ್ವಿಂದರ್ ಆವನಾ 03
ಅಂಬಟಿ ರಾಯುಡು ಔಟಾಗದೆ 34
ಹರಭಜನ್ ಸಿಂಗ್ ಸಿ ಶಾನ್ ಮಾರ್ಷ್ ಬಿ ಪರ್ವಿಂದರ್ ಆವನಾ 00
ರಾಬಿನ್ ಪೀಟರ್ಸನ್ ಔಟಾಗದೆ 16
ಇತರೆ: (ಲೆಗ್ಬೈ-4, ವೈಡ್-4, ನೋಬಾಲ್-1) 09

ವಿಕೆಟ್ ಪತನ: 1-52 (ಜೇಮ್ಸ ಫ್ರಾಂಕ್ಲಿನ್; 7.5), 2-59 (ಸಚಿನ್ ತೆಂಡೂಲ್ಕರ್; 9.1), 3-66 (ದಿನೇಶ್ ಕಾರ್ತಿಕ್; 10.5), 4-90 (ಕೀರನ್ ಪೊಲಾರ್ಡ್; 13.4), 5-135 (ರೋಹಿತ್ ಶರ್ಮ; 17.2), 6-135 (ಹರಭಜನ್ ಸಿಂಗ್; 17.4).

ಬೌಲಿಂಗ್: ಪ್ರವೀಣ್ ಕುಮಾರ್ 4-0-25-0 (ವೈಡ್-1), ಭಾರ್ಗವ್ ಭಟ್ 4-0-34-0 (ನೋಬಾಲ್-1), ಪರ್ವಿಂದರ್ ಆವನಾ 4-0-39-3 (ವೈಡ್-1), ಪಿಯೂಶ್ ಚಾವ್ಲಾ 4-0-46-1 (ವೈಡ್-1), ಅಜರ್ ಮಹ್ಮೂದ್ 3.5-0-23-2.

ಫಲಿತಾಂಶ: ಮುಂಬೈ ಇಂಡಿಯನ್ಸ್ಗೆ 4 ವಿಕೆಟ್ಗಳ ಗೆಲುವು.

ಪಂದ್ಯ ಶ್ರೇಷ್ಠ: ಅಂಬಟಿ ರಾಯುಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.