ಬುಧವಾರ, ಮಾರ್ಚ್ 3, 2021
28 °C
ಅಪಾರ್ಟ್‌ಮಿಂಟು

ಮುಂಬೈನ 55 ಅಂತಸ್ತಿನ ಆಕರ್ಷಕ ಟವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನ 55 ಅಂತಸ್ತಿನ ಆಕರ್ಷಕ ಟವರ್

ಮುಂಬೈ ಮೂಲದ ಅಹುಜಾ ಕನ್‌ಸ್ಟ್ರಕ್ಟರ್ಸ್‌ ಕಂಪೆನಿಯು ವೊರ್ಲಿಯಲ್ಲಿ 55 ಅಂತಸ್ತಿನ ಟವರ್‌ನಲ್ಲಿನ ಅಪಾರ್ಟ್‌ಮೆಂಟ್‌ಗಳ ಮಾರಾಟ ಪ್ರಾರಂಭಿಸಿದೆ. ಒಟ್ಟು 78 ಅಪಾರ್ಟ್‌ಮೆಂಟ್‌ಗಳು ಕಟ್ಟಡದಲ್ಲಿವೆ.

40ನೇ ಮಹಡಿಯ ನಂತರದ ಹಂತಗಳಲ್ಲಿ ಏಳು ಪ್ರತ್ಯೇಕ ಅಪಾರ್ಟ್‌ಮೆಂಟ್‌ಗಳಿರುವುದು (ಎಕ್ಸ್‌ಕ್ಲುಸಿವ್ ಅಪಾರ್ಟ್‌ಮೆಂಟ್‌ಗಳು) ಕಟ್ಟಡ ನಿರ್ಮಾಣದ ವಿಶೇಷ. ನ್ಯೂಯಾರ್ಕ್ ಮೂಲದ ಅಂತರರಾಷ್ಟ್ರೀಯ ಒಳಾಂಗಣ ವಿನ್ಯಾಸ ಕಂಪೆನಿ ವಿಲ್ಸನ್ ಅಸೋಸಿಯೇಟ್ಸ್‌ನ ಸಹಭಾಗಿತ್ವದ ನಿರ್ಮಾಣ ಇದು ಎನ್ನುವುದು ಯೋಜನೆಯ ಆಕರ್ಷಣೆಗಳಲ್ಲಿ ಒಂದು.ಏಳು ಎಕ್ಸ್‌ಕ್ಲುಸಿವ್ ಅಪಾರ್ಟ್‌ಮೆಂಟ್‌ಗಳ ಅಳತೆಯು 530-600 ಚದರ ಮೀಟರ್‌ಗಳಷ್ಟು ಇದೆ. ಒಂದು ಚದರ ಮೀಟರ್ ದರ 9,310 ಡಾಲರ್ (ಸುಮಾರು ₨5.94 ಲಕ್ಷ). ಉಳಿದೆಲ್ಲ ಅಪಾರ್ಟ್‌ಮೆಂಟ್‌ಗಳು ಬಿಕರಿಯಾಗಿದ್ದು, 1,100 ಚದರ ಮೀಟರ್‌ನಷ್ಟು ಅಳತೆಯ ಕೆಲವು ಪೆಂಟ್‌ಹೌಸ್‌ಗಳು ಮಾರಾಟವಾಗಬೇಕಿವೆ. ಅವುಗಳ ಪ್ರಾರಂಭಿಕ ಬೆಲೆ 1.4 ಕೋಟಿ ಡಾಲರ್ (ಸುಮಾರು ₨ 89.4 ಕೋಟಿ).ಮುಕ್ಕಾಲು ಭಾಗದಷ್ಟು ಕಾಮಗಾರಿ ಮುಗಿದಿದ್ದು, ಆಧುನಿಕ ಕಾಲದ ಅಂತರರಾಷ್ಟ್ರೀಯ ಮಟ್ಟದ ಐಷಾರಾಮಿ ಸವಲತ್ತುಗಳನ್ನು ಅಪಾರ್ಟ್‌ಮೆಂಟ್ ಒಳಗೊಂಡಿದೆ ಎಂದು ಅಹುಜಾ ಕನ್‌ಸ್ಟ್ರಕ್ಟರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಅಹುಜಾ ಹೇಳಿದರು.ಸಿಂಗಪೂರ್‌ನ ಪಾಮರ್ ಅಂಡ್ ಟರ್ನರ್ ಕಂಪೆನಿಯವರು ವಿನ್ಯಾಸಗೊಳಿಸಿರುವ ಅಹುಜಾ ಟವರ್ಸ್‌ನ ನಾಲ್ಕು ಮೀಟರ್ ಎತ್ತರದ ಚಾವಣಿಯ ಅಪಾರ್ಟ್‌ಮೆಂಟ್‌ಗಳಲ್ಲಿ 270 ಡಿಗ್ರಿ ಸಮುದ್ರ ತಟದ ನೋಟ ಕಾಣುತ್ತದೆ. ವ್ಯಾಪಾರ ಕೇಂದ್ರಗಳು, ಮಿನಿ ಥಿಯೇಟರ್, ವೈನ್ ಸೆಲಾರ್, ಕ್ಲಬ್ ಎಲ್ಲವೂ ಇಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.