ಚೆನ್ನೈ (ಪಿಟಿಐ): ಅಲ್ಪ ಗುರಿ ಎದುರು ಭರ್ಜರಿ ಇನಿಂಗ್ಸ್ ಕಟ್ಟಿದ ರಿಚರ್ಡ್ ಲೇವಿ ಮುಂಬೈ ಇಂಡಿಯನ್ಸ್ ತಂಡದ ಶುಭಾರಂಭಕ್ಕೆ ಕಾರಣರಾಗಿದ್ದಾರೆ. ಅವರ ಅರ್ಧ ಶತಕದ ನೆರವಿನಿಂದ ಮುಂಬೈ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಚೆನ್ನೈ ನೀಡಿದ 113 ರನ್ಗಳ ಗುರಿಯನ್ನು ಹರಭಜನ್ ಸಿಂಗ್ ಬಳಗ 16.5 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ತಲುಪಿತು. ಇಷ್ಟು ಸುಲಭದ ಗೆಲುವಿಗೆ ಕಾರಣ ಮುಂಬೈನ ಆರಂಭಿಕ ಬ್ಯಾಟ್ಸ್ಮನ್ಗಳು.

ಲೇವಿ (50; 35 ಎಸೆತ, 6 ಬೌಂ, 3 ಸಿ.) ಹಾಗೂ ಸಚಿನ್ ತೆಂಡೂಲ್ಕರ್ (16) ಮೊದಲ ವಿಕೆಟ್ಗೆ 47 ಎಸೆತಗಳಲ್ಲಿ 69 ರನ್ ಸೇರಿಸಿದರು. ಆದರೆ ಕೈಬೆರಳಿಗೆ ಗಾಯವಾದ ಕಾರಣ ಸಚಿನ್ ಪೆವಿಲಿಯನ್ಗೆ ಹಿಂದಿರುಗಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ದೋನಿ ಬಳಗ 19.5 ಓವರ್ಗಳಲ್ಲಿ 112 ರನ್ಗಳಿಗೆ ಆಲೌಟಾಯಿತು. ಟಾಸ್ ಗೆದ್ದು ಬೌಲಿಂಗ್ಗೆ ಮುಂದಾದ ಹರಭಜನ್ ಅವರ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಪ್ರಗ್ಯಾನ್ ಓಜಾ (17ಕ್ಕೆ 2) ಕೀರನ್ ಪೊಲಾರ್ಡ್ (15ಕ್ಕೆ 2) ಮತ್ತು ಲಸಿತ್ ಮಾಲಿಂಗ (16ಕ್ಕೆ 2) ಸೂಪರ್ ಕಿಂಗ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಚೆನ್ನೈ ಪರ ಗರಿಷ್ಠ ಮೊತ್ತ ಗಳಿಸಿದ್ದು ಸುರೇಶ್ ರೈನಾ (36, 26 ಎಸೆತ, 2 ಬೌಂ, 1 ಸಿಕ್ಸರ್). ಇತರ ಯಾವುದೇ ಬ್ಯಾಟ್ಸ್ ಮನ್ಗಳು ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲಲಿಲ್ಲ. ಚೆನ್ನೈ ತಂಡಕ್ಕೆ ಯಾವ ಹಂತದಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.

ಮೊದಲ ವಿಕೆಟ್ ರೂಪದಲ್ಲಿ ಫಾಫ್ ಡು ಪ್ಲೆಸಿಸ್ (3) ಪೆವಿಲಿಯನ್ಗೆ ಮರಳಿದಾಗ ತಂಡದ ಮೊತ್ತ ಕೇವಲ ನಾಲ್ಕು. ಮುರಳಿ ವಿಜಯ್ (17 ಎಸೆತಗಳಲ್ಲಿ 10) ಮತ್ತು ರೈನಾ ಎರಡನೇ ವಿಕೆಟ್ಗೆ 34 ರನ್ಗಳನ್ನು ಸೇರಿಸಿದರು.

ಆ ಬಳಿಕ ರೈನಾ ಅವರು ಡ್ವೇನ್ ಬ್ರಾವೊ (19 ಎಸೆತಗಳಲ್ಲಿ 19) ಜೊತೆ ಮೂರನೇ ವಿಕೆಟ್ಗೆ 37 ರನ್ ಕಲೆಹಾಕಿದರು. ಚೆನ್ನೈ ಪರ ಮೂಡಿಬಂದ ಉತ್ತಮ ಜೊತೆಯಾಟ ಇದು. 10ನೇ ಓವರ್ನಲ್ಲಿ ಎರಡು ವಿಕೆಟ್ಗೆ 75 ರನ್ ಗಳಿಸಿದ್ದ ಸೂಪರ್ ಕಿಂಗ್ಸ್ ಉತ್ತಮ ಮೊತ್ತದತ್ತ ಮುನ್ನಡೆಯುವ ಸೂಚನೆ ನೀಡಿತ್ತು. ಆದರೆ ರೈನಾ ಔಟಾಗುತ್ತಿದ್ದಂತೆಯೇ ತಂಡ ಕುಸಿತದ ಹಾದಿ ಹಿಡಿಯಿತು.

ರೈನಾ ಮತ್ತು ಬ್ರಾವೊ ವಿಕೆಟ್ ಪಡೆದ ಓಜಾ ಮುಂಬೈ ತಂಡಕ್ಕೆ `ಬ್ರೇಕ್~ ನೀಡಿದರು. ಓಜಾ ಎಸೆತದಲ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟುವ ಪ್ರಯತ್ನದಲ್ಲಿ ರೈನಾ ಎಡವಿದರು. ಚೆಂಡು ನೇರವಾಗಿ ಲಸಿತ್ ಮಾಲಿಂಗ ಕೈಸೇರಿತು.

ಸ್ಕೋರು ವಿವರ
ಚೆನ್ನೈ ಸೂಪರ್ ಕಿಂಗ್ಸ್: 19.5 ಓವರ್ಗಳಲ್ಲಿ 112
ಫಾಫ್ ಡು ಪ್ಲೆಸಿಸ್ ರನೌಟ್ 03
ಮುರಳಿ ವಿಜಯ್ ಸಿ ಹರಭಜನ್ ಬಿ ಫ್ರಾಂಕ್ಲಿನ್ 10
ಸುರೇಶ್ ರೈನಾ ಸಿ ಮಾಲಿಂಗ ಬಿ ಪ್ರಗ್ಯಾನ್ ಓಜಾ 36
ಡ್ವೇನ್ ಬ್ರಾವೊ ಸಿ ಪೊಲಾರ್ಡ್ ಬಿ ಪ್ರಗ್ಯಾನ್ ಓಜಾ 19
ಅಲ್ಬಿ ಮಾರ್ಕೆಲ್ ಸಿ ಓಜಾ ಬಿ ಕೀರನ್ ಪೊಲಾರ್ಡ್ 03
ಬದರೀನಾಥ್ ಸಿ ಹರಭಜನ್ ಬಿ ಪೊಲಾರ್ಡ್ 10
ಮಹೇಂದ್ರ ಸಿಂಗ್ ದೋನಿ ರನೌಟ್ 04
ರವೀಂದ್ರ ಜಡೇಜ ಬಿ ಲಸಿತ್ ಮಾಲಿಂಗ 03
ಆರ್. ಅಶ್ವಿನ್ ರನೌಟ್ 03
ಶಾದಾಬ್ ಜಕಾತಿ ಔಟಾಗದೆ 06
ಡಗ್ ಬೋಲಿಂಜರ್ ಸಿ ರೋಹಿತ್ ಬಿ ಲಸಿತ್ ಮಾಲಿಂಗ 03
ಇತರೆ: (ಲೆಗ್ಬೈ-5, ವೈಡ್-7) 12
ವಿಕೆಟ್ ಪತನ: 1-4 (ಪ್ಲೆಸಿಸ್; 0.4), 2-38 (ವಿಜಯ್; 5.5), 3-75 (ರೈನಾ; 9.5), 4-80 (ಬ್ರಾವೊ; 11.2), 5- 85 (ಮಾರ್ಕೆಲ್; 12.4), 6-95 (ದೋನಿ; 15.1), 7-99 (ಬದರೀನಾಥ್; 16.1), 8-103 (ಅಶ್ವಿನ್; 17.1), 9-104 (ಜಡೇಜ; 17.6), 10-112 (ಬೋಲಿಂಜರ್; 19.5)
ಬೌಲಿಂಗ್: ಲಸಿತ್ ಮಾಲಿಂಗ 3.5-0-16-2, ಅಬು ನೆಚೀಮ್ ಅಹ್ಮದ್ 2-0-17-0, ಹರಭಜನ್ ಸಿಂಗ್ 4-0-24-0, ಜೇಮ್ಸ ಫ್ರಾಂಕ್ಲಿನ್ 2-0-18-1, ಪ್ರಗ್ಯಾನ್ ಓಜಾ 4-0-17-2, ಕೀರನ್ ಪೊಲಾರ್ಡ್ 4-0-15-2

ಮುಂಬೈ ಇಂಡಿಯನ್ಸ್ 16.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115
ರಿಚರ್ಡ್ ಲೇವಿ ಸಿ ಬೊಲಿಂಜರ್ ಬಿ ಡ್ವೇನ್ ಬ್ರಾವೊ 50
ಸಚಿನ್ ತೆಂಡೂಲ್ಕರ್ ಗಾಯಗೊಂಡು ನಿವೃತ್ತಿ 16
ರೋಹಿತ್ ಶರ್ಮ ಸಿ ದೋನಿ ಬಿ ಡಗ್ ಬೊಲಿಂಜರ್ 00
ಅಂಬಾಟಿ ರಾಯುಡು ಔಟಾಗದೆ 18
ಜೇಮ್ಸ ಫ್ರಾಂಕ್ಲಿನ್ ಔಟಾಗದೆ 25
ಇತರೆ (ಲೆಗ್ಬೈ-3, ವೈಡ್-3) 06
ವಿಕೆಟ್ ಪತನ: 1-69 (ಲೇವಿ; 7.5); 2-70 (ರೋಹಿತ್; 8.3); 2-72* (ಸಚಿನ್, ಗಾಯಗೊಂಡು ನಿವೃತ್ತಿ).
ಬೌಲಿಂಗ್: ಅಲ್ಬಿ ಮಾರ್ಕೆಲ್ 4-0-20-0 (ವೈಡ್-1), ಡಗ್ ಬೋಲಿಂಜರ್ 3.5-0-34-1 (ವೈಡ್-1), ಆರ್.ಅಶ್ವಿನ್ 4-0-20-0, ರವೀಂದ್ರ ಜಡೇಜಾ 1-0-16-0, ಡ್ವೇನ್ ಬ್ರಾವೊ 3-0-14-0 (ವೈಡ್-1), ಶಾದಾಬ್ ಜಕಾತಿ 1-0-8-0
ಫಲಿತಾಂಶ: ಮುಂಬೈ ಇಂಡಿಯನ್ಸ್ಗೆ 8 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ರಿಚರ್ಡ್ ಲೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.