ಮುಕ್ತ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು (ಎನ್ಎಸ್ಎಸ್) ಆರಂಭಿಸುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ದೇಶದಲ್ಲಿ ಈ ಯೋಜನೆ ಅಳವಡಿಸಿಕೊಂಡ ಮುಕ್ತ ವಿವಿಗಳಲ್ಲಿ ಮೈಸೂರಿನ ಕರಾಮುವಿ ಎರಡನೆಯದು. ಈ ಮೊದಲು ನಾಸಿಕ್ನ ಯಶವಂತರಾವ್ ಚವಾಣ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯ ಈ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು.

ಕೇವಲ ಶ್ರಮದಾನಕ್ಕೆ ಮೀಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಈಗ ಸಾಕಷ್ಟು ವಿಕಾಸ ಹೊಂದಿದ್ದು, ಸ್ವಯಂ ಸೇವಕರ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳ ನಡುವೆ ನಿಕಟ ಸಂಬಂಧ ಏರ್ಪಡಿಸುವ ಸೇತುವಾಗಿದೆ.

ಸಮುದಾಯದ ಸಮಸ್ಯೆಗಳನ್ನು ಅರಿತು ಬಗೆಹರಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಗೊಳಿಸುವ ಪ್ರಮುಖ ಗುರಿ ಹೊಂದಿದೆ. `ನನಗಲ್ಲ, ನಿನಗೆ~ ಇದು ರಾಷ್ಟ್ರೀಯ ಸೇವಾ ಯೋಜನೆ ಧ್ಯೇಯ. ಸೇವೆಯ ಮೂಲಕ ಶಿಕ್ಷಣ ಹಾಗೂ ಶಿಕ್ಷಣ ಮೂಲಕ ಸೇವೆಯನ್ನೂ ನೀಡುವುದೇ ರಾಷ್ಟ್ರೀಯ ಸೇವಾ ಯೋಜನೆ.

ಈ ಯೋಜನೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಾಪೂಜಿಯವರು ಕಂಡ ಪರಿಕಲ್ಪನೆಯ ಕೂಸು. ಯುವಜನರ ಅದರಲ್ಲೂ ಶಾಲಾ- ಕಾಲೇಜು ವಿದ್ಯಾರ್ಥಿಗಳ ಅಪಾರ ಯುವಶಕ್ತಿಯನ್ನು ಸೇವಾಕಾರ್ಯಗಳಿಗೆ ಬಳಸಿಕೊಳ್ಳಬೇಕು; ಅದನ್ನು ತರಗತಿಗಳ ನಾಲ್ಕು ಗೋಡೆಗಳ ನಡುವೆ ಕೇವಲ ಕಲಿಕೆಗಾಗಿ ಸೀಮಿತಗೊಳಿಸದೆ ಸಮಾಜ ತನ್ಮೂಲಕ ರಾಷ್ಟ್ರದ ಪ್ರಗತಿಗೂ ಬಳಸಿಕೊಳ್ಳಬೇಕು ಎಂಬುದು ಅವರ ಮಹದಾಸೆಯಾಗಿತ್ತು.

20 ಘಟಕ ಮಂಜೂರು
ರಾಷ್ಟ್ರೀಯ ಸೇವಾ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬೇಕೆಂದು ಕರ್ನಾಟಕ ರಾಜ್ಯ ಮುಕ್ತ ವಿವಿ 2011-12ರಲ್ಲಿ ರಾಜ್ಯ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನೆ ಕೋಶಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರ ಇದಕ್ಕೆ ಸ್ಪಂದಿಸಿ ಎರಡು ಸಾವಿರ ಸ್ವಯಂ ಸೇವಕರ ಸಂಖ್ಯಾಬಲವನ್ನು ಮಂಜೂರು ಮಾಡಿತ್ತು.

ಅದರ ಫಲವಾಗಿ ರಾಜ್ಯದಾದ್ಯಂತ 20 ಅಧ್ಯಯನ ಕೇಂದ್ರಗಳನ್ನು ಆಯ್ಕೆ ಮಾಡಿ ಅವುಗಳಿಗೆ ತಲಾ 100 ಸ್ವಯಂ ಸೇವಕರ 20 ಘಟಕಗಳನ್ನು ಹಂಚಲಾಯಿತು. ಇವುಗಳ 20 ಮಂದಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಿಗೆ 5 ದಿವಸಗಳ ಅಗತ್ಯವಾದ ಸಂಕ್ಷಿಪ್ತ ತರಬೇತಿಯನ್ನು ನೀಡಲಾಗಿದೆ.

ಅಂತೆಯೇ ಅಧ್ಯಯನ ಕೇಂದ್ರಗಳ ಸಂಯೋಜನಾ ಅಧಿಕಾರಿಗಳಿಗೂ/ ಪ್ರಾಂಶುಪಾಲರಿಗೂ ಎರಡು ದಿವಸಗಳ ತರಬೇತಿಯನ್ನು ನೀಡಲಾಗಿದೆ.

`ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಐವರು ಅನುಭವಿಗಳ ತಂಡವನ್ನು ನಾಸಿಕ್ಗೆ ಕಳುಹಿಸಲಾಗಿತ್ತು. ಅವರು ಅಲ್ಲಿನ ಅನುಷ್ಠಾನ ಅಧ್ಯಯನ ಮಾಡಿ, ಮುಕ್ತ ವಿವಿಯಲ್ಲಿ ಅದನ್ನು ಹೇಗೆ ಅಳವಡಿಸಬಹುದು ಎಂಬುದರ ವರದಿ ಸಲ್ಲಿಸಿದ್ದರು.

ಅದರಂತೆ ಮಾರ್ಗದರ್ಶಿ ಸಿದ್ಧಪಡಿಸಿ ವಿಶ್ವವಿದ್ಯಾಲಯ ಮಟ್ಟದ ಸಲಹಾ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈ ರೀತಿಯ ಭದ್ರ ಬುನಾದಿಯೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ಮುಕ್ತ ವಿವಿಯಲ್ಲಿ ಆರಂಭಿಸಲಾಗಿದೆ~ ಎನ್ನುತ್ತಾರೆ ಕರಾಮುವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ.

ನಾಯಕತ್ವ ಶಿಬಿರ...
ಕಾಲೇಜು ಅಥವಾ ಅಧ್ಯಯನ ಕೇಂದ್ರಗಳ ಮಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳನ್ನು ದೈನಂದಿನ ಮತ್ತು ವಾರ್ಷಿಕ ವಿಶೇಷ ಶಿಬಿರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ವಿವಿ ಮಟ್ಟದ ಶಿಬಿರವನ್ನು `ನಾಯಕತ್ವ ಶಿಬಿರ~ ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ.

ನಾಯಕತ್ವ ಶಿಬಿರದ ಕಾರ್ಯಕ್ರಮದಲ್ಲಿ 20 ಘಟಕಗಳಿಂದ ಆಯ್ಕೆ ಮಾಡಿದ 200 ಮಂದಿಗೆ ಈಗಾಗಲೆ 10 ದಿನ ತರಬೇತಿ ನೀಡಲಾಗಿದೆ. ಇದು ಮುಂದಿನ ವರ್ಷಗಳಲ್ಲಿ ಅಧ್ಯಯನ ಕೇಂದ್ರಗಳ ಮಟ್ಟದಲ್ಲಿ ನಡೆಸುವ ಶಿಬಿರಗಳನ್ನು ಆಯೋಜಿಸುವುದಕ್ಕೆ ಒಂದು ರೀತಿಯಲ್ಲಿ ಪೂರ್ವ ತಯಾರಿ.

ಶಿಬಿರಾರ್ಥಿಗಳಿಗೆ ಹೊರಾಂಗಣದ ಬದುಕು, ಸಹಬಾಳ್ವೆ, ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದರ ಜೊತೆಗೆ ರಚನಾತ್ಮಕ ಕೆಲಸಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡಲಾಗುತ್ತದೆ.

ಇದರಿಂದಾಗಿ, ಅವರಲ್ಲಿ ವ್ಯಕ್ತಿತ್ವ ವಿಕಸನ, ಧೈರ್ಯ, ಆತ್ಮವಿಶ್ವಾಸ, ಒಡನಾಡಿ ಜೀವನ, ವೃತ್ತಿಗೌರವ, ಸರಳ ಜೀವನ, ಸಂಯಮದ ಜೀವನ, ಸಂಪನ್ಮೂಲ ಸಂಗ್ರಹಣ, ಹೊಂದಾಣಿಕೆ ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಶಿಬಿರದಲ್ಲಿ ಶ್ರಮದಾನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಕನಸು ಕಂಡ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಮಾದರಿಯ ಉದ್ಯಾನ ನಿರ್ಮಾಣ ಮಾಡಿ, ಅವರ ತತ್ವಗಳನ್ನು ತಿಳಿಸುವ ಫಲಕಗಳನ್ನು ಸ್ಥಾಪಿಸುವುದು ವಿವಿಯ ಉದ್ದೇಶ. ಆಟದ ಮೈದಾನ ಸಜ್ಜುಗೊಳಿಸುವುದು, ಯೋಗ, ಅಗ್ನಿಶಮನ ತರಬೇತಿ, ಮಳೆನೀರಿನ ಸಂಗ್ರಹ, ಶೈಕ್ಷಣಿಕ ಚಟುವಟಿಕೆಗಳು, ಸ್ಪರ್ಧೆಗಳು, ಉಪನ್ಯಾಸ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇದರಡಿ ನಡೆಯಲಿವೆ.

ಸ್ವಯಂ ಸೇವಕರ ಆಯ್ಕೆ ಹೇಗೆ?
ಕರ್ನಾಟಕ ರಾಜ್ಯ ಮುಕ್ತ ವಿವಿ 137 ಅಧ್ಯಯನ ಕೇಂದ್ರ ಹೊಂದಿದ್ದು, 2.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತ್ದ್ದಿದಾರೆ. ಇದರಲ್ಲಿ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ 20 ಅಧ್ಯಯನ ಕೇಂದ್ರಗಳನ್ನು ಗುರುತಿಸಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಆರಂಭಕ್ಕೆ ಅನುಮತಿ ಪಡೆಯಲಾಯಿತು.

ಪ್ರತೀ ಕೇಂದ್ರಕ್ಕೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯನ್ನು ನೇಮಕ ಮಾಡಿ ತರಬೇತಿ ನೀಡಲಾಯಿತು.

ಮುಕ್ತ ವಿವಿ ಪದವಿ ವಿದ್ಯಾರ್ಥಿಗಳ ವಾರಾಂತ್ಯ ತರಗತಿ ಅವಧಿ ಸಾಮಾನ್ಯವಾಗಿ ಡಿಸೆಂಬರ್ನಿಂದ ಮಾರ್ಚ್ವರೆಗೆ. ಇಲ್ಲಿಗೆ ಬಂದ ಆಸಕ್ತ ವಿದ್ಯಾರ್ಥಿಗಳನ್ನು ಎನ್ಎಸ್ಎಸ್ಗೆ ನೋಂದಾಯಿಸಲಾಯಿತು. ಹೀಗೆ ಒಂದೊಂದು ಕೇಂದ್ರದಿಂದ 100 ಆಸಕ್ತ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಯಿತು.

ಈಚೆಗೆ ನಡೆದ ಮುಕ್ತ ವಿವಿ ಎನ್ಎಸ್ಎಸ್ ಶಿಬಿರದಲ್ಲಿ ತಲಾ ಒಂದು ಘಟಕದಿಂದ 10 ಸ್ವಯಂ ಸೇವಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ಚಾಮರಾಜನಗರ, ದಕ್ಷಿಣ ಕನ್ನಡ, ಬೀದರ್ ಸೇರಿದಂತೆ ವಿವಿಧ ಕೇಂದ್ರಗಳ 147 ಸ್ವಯಂ ಸೇವಕರು, ಮಹಿಳೆಯರು. ಗೃಹಿಣಿಯರು ಹಾಗೂ ಮಧ್ಯವಯಸ್ಕರು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.