ಕುಂದಾಪುರ: `ಮುಖ್ಯವಾಹಿನಿಗೆ ಮರಳುವ ಇಚ್ಛೆ ಹೊಂದಿರುವ ನಕ್ಸಲೀಯರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಾಗಿದೆ. ನಕ್ಸಲ್ವಾದಿಗಳ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಶಾಂತಿಯ ಬದಲು ಬಂದೂಕಿನೊಂದಿಗೆ ಮಾತನಾಡುತ್ತೇವೆ ಎನ್ನುವ ಕಾನೂನು ಭಂಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ~ ಎಂದು ರಾಜ್ಯ ಗೃಹ ಸಚಿವ ಆರ್.ಅಶೋಕ ಹೇಳಿದರು.

ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ಕುಂದಾಪುರಕ್ಕೆ ಬುಧವಾರ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ದೇಶದ ಕಾನೂನು ವ್ಯವಸ್ಥೆಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡುತ್ತೇವೆ ಎನ್ನುವ ದೇಶದ್ರೋಹಿ ನಕ್ಸಲರನ್ನು ಬೆಂಬಲಿಸುವುದು ಕೂಡ ಕಾನೂನು ರೀತ್ಯಾ ಅಪರಾವಾಗುತ್ತದೆ.

ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲರ ಗುಂಪಿಗೆ ಇಲ್ಲಿ ನಿರೀಕ್ಷೆಯ ಬೆಂಬಲ ಸಿಕ್ಕಿಲ್ಲ. ಅವರ ತಂಡದಲ್ಲಿ ಕೇವಲ 15-20 ಮಂದಿ ಮಾತ್ರ ಸ್ಥಳೀಯರಿದ್ದಾರೆ. ಇನ್ನುಳಿದವರು ತಮಿಳುನಾಡು ಹಾಗೂ ಇತರ ರಾಜ್ಯಗಳಿಂದ ಬಾಡಿಗೆ ಹಂತಕರಂತೆ ಬಂದು ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆಯೂ ಇಲಾಖೆಗೆ ಮಾಹಿತಿ ಇದ್ದು, ಪೊಲೀಸ್ ಇಲಾಖೆ ಅವರ ವಿರುದ್ಧ ಯೋಜಿತ ಕಾರ್ಯಾಚರಣೆ ನಡೆಸಲಿದೆ~ ಎಂದು ತಿಳಿಸಿದರು.

ಹೆಚ್ಚಿನ ತನಿಖೆ: ಶಂಕಿತ ನಕ್ಸಲ್ ಬೆಂಬಲಿಗ ಎನ್ನುವ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮೇಲಿರುವ ಆರೋಪಗಳ ಕುರಿತು ಇಲಾಖೆ ವಿಸ್ತೃತ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಆತನ ಮೇಲಿರುವ ಅರೋಪಗಳ ಕುರಿತು ಸಾಕಷ್ಟು ಮಾಹಿತಿಗಳು ದೊರಕಿರುವುದರಿಂದ ಇಲಾಖೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಸುಮಾರು 18 ಸಾವಿರ ಸಿಬ್ಬಂದಿ ಕೊರತೆ ಇದೆ. ಅದನ್ನು ಶೀಘ್ರದಲ್ಲಿ ತುಂಬಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಪ್ರತಿ ಜಿಲ್ಲೆಯಲ್ಲಿಯೂ ಪೊಲೀಸರ ದೌರ್ಜನ್ಯಗಳ ಕುರಿತು ದೂರು ನೀಡಲು ಪ್ರತ್ಯೇಕ ಕೋಶವನ್ನು ರಚಿಸುವ ಕುರಿತು ಸರ್ಕಾರ ಈಗಾಗಲೆ ತೀರ್ಮಾನ ಕೈಗೊಂಡಿದೆ ಎಂದರು.

ಕರಾವಳಿ ಭಾಗಕ್ಕೆ ಅವಶ್ಯವಿರುವ ಕರಾವಳಿ ಕಾವಲು ಪಡೆಯ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಹಲವು ವರ್ಷಗಳಿಂದ ಬೇಡಿಕೆ ಇರುವ ಕುಂದಾಪುರದ ಆರ್ಟಿಒ ಕಚೇರಿ ಪ್ರಾರಂಭಕ್ಕಾಗಿ ಈಗಾಗಲೆ ಸಾರಿಗೆ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅನುಮತಿ ದೊರೆಕಿದ ಕೂಡಲೆ ಉಪವಿಭಾಗ ಕಚೇರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕರಾವಳಿಯ ಕಡಲ್ಕೊರೆತದ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತುರ್ತು ಪರಿಹಾರ ಕಾರ್ಯಗಳಿಗಾಗಿ ಒತ್ತಾಯ ಮಾಡುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಮಹೇಶ್ ಠಾಕೂರ್, ಬೈಂದೂರು ಗ್ರಾ.ಪಂ ಉಪಾಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.