ಸೋಮವಾರ, ಜೂನ್ 14, 2021
27 °C
ಮಿಜೋರಾಂ ಬ್ರು ವಲಸಿಗರಿಗೆ ಅಂಚೆ ಮತದಾನ ಬೇಡ–ಸಿ.ಎಂ

ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜ್್ವಾಲ್‌ (ಪಿಟಿಐ): ಮಿಜೋರಾಂನ ಬ್ರು ವಲಸಿಗರಿಗೆ ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 9ರಂದು ನಡೆಯುವ ಮತದಾನದಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ಅವರನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್‌ ಥನ್‌ಹವ್ಲಾ ಅವರು ಕೋರಿದ್ದಾರೆ.ಬ್ರು ಸಮುದಾಯದ ಜನರು ಮತ ಚಲಾಯಿಸಲು ಬಯಸಿದರೆ ರಾಜ್ಯ­ದೊಳಕ್ಕೆ ಬಂದು ಮತ ಚಲಾಯಿಸ­ಬೇಕೇ ಹೊರತು ಅಂಚೆ ಮೂಲಕ ಅಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಿಜೋರಾಂ ಮುಖ್ಯಮಂತ್ರಿ ಪ್ರತಿಪಾದಿಸಿ­ದ್ದಾರೆ. ಈ ಮೊದಲು ವಲಸಿಗರ ಶಿಬಿರ­ದ­ಲ್ಲಿಯೇ ಮತ ಚಲಾಯಿಸಲು ಅವ­ಕಾಶ ಕೊಡಬೇಕು ಎಂದು ಕೋರಲಾಗಿತ್ತು.ಆಯೋಗ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ.  1997 ಮತ್ತು 2009ರಲ್ಲಿ ಮಿಜೋರಾಂ­­ನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ತ್ರಿಪುರಾಕ್ಕೆ ವಲಸೆ ಬಂದ ಬ್ರು ಸಮುದಾಯದ ಕೆಲವು ಕುಟುಂಬಗಳಷ್ಟೇ ಹಿಂದಿರು­ಗಿವೆ. ಉಳಿದವರು ಶಿಬಿರಗಳಲ್ಲಿಯೇ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.